ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ನಿಂದ ಬೀರಮಲೆ ಪ್ರಜ್ಞಾಶ್ರಮದಲ್ಲಿ ರಕ್ಷಾಬಂಧನ

0

ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ವತಿಯಿಂದ ಬೀರಮಲೆ ಪ್ರಜ್ಞಾಶ್ರಮದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನೆರವೇರಿತು.

ಅಧ್ಯಕ್ಷೆ ಮಲ್ಲಿಕಾ ಜೆ ರೈ, ಕಾರ್ಯದರ್ಶಿ ರೋಹಿಣಿ ಆಚಾರ್ಯ, ಕೋಶಾಧಿಕಾರಿ ಸುಮಂಗಲಾ ಶೆಣೈ, ಸದಸ್ಯರಾದ ಉಷಾ ಆಚಾರ್, ವೀಣಾ ಬಿಕೆ, ಲಲಿತ, ಮಹಾಲಿಂಗ ನಾಯ್ಕ, ಅನ್ನಪೂರ್ಣಿಮಾ ಆರ್ ರೈ, ಪುರುಷೋತ್ತಮ್ ಶೆಟ್ಟಿ, ಶೋಭಾ ರೈ ಚಂದ್ರಕಾಂತ್, ಪ್ರಹ್ಲಾದ್, ಹರಿಣಾಕ್ಷಿ ಜೆ ಶೆಟ್ಟಿ, ಗಂಗಾಧರ ಆಚಾರ್ಯ, ಪ್ರಹ್ಲಾದ್, ಆಶಾಲತಾ ಎ ಕೆ. ಮತ್ತು ಇತರರು ಪಾಲ್ಗೊಂಡು ಪ್ರಜ್ಞಾಶ್ರಮದಲ್ಲಿ ಮಕ್ಕಳಿಗೆ ದೀಪದಾರತಿ ಎತ್ತಿ, ರಕ್ಷೆಯನ್ನು ಕಟ್ಟಿ ಶುಭ ಹಾರೈಸಿದರು.

ಹಣೆಗೆ ತಿಲಕವಿಟ್ಟು, ಸಿಹಿ ತಿಂಡಿ ಹಣ್ಣುಗಳನ್ನು ನೀಡಿದರು. ಪ್ರಜ್ಞಾ ಆಶ್ರಮದಲ್ಲಿ ಮಕ್ಕಳಂತೆ ನೋಡಿಕೊಳ್ಳುತ್ತಿರುವ ಮಗುಮನಸ್ಸಿನ ಅಣ್ಣಪ್ಪ ಮತ್ತು ಜ್ಯೋತಿ ದಂಪತಿ ಹಾಗೂ ಅವರ ಇಬ್ಬರು ಮಕ್ಕಳಿಗೆ ಎಸ್ ಸಿ ಐ ಅಧ್ಯಕ್ಷೆ ಮಲ್ಲಿಕಾ ಜೆ ರೈ ಅವರು ಬೀಳದ ಹನಿಗಳು ಚುಟುಕು ಕವನ ಸಂಕಲನವನ್ನು ಆಶ್ರಮಕ್ಕೆ ಉಡುಗೊರೆಯಾಗಿ ನೀಡಿದರು.

LEAVE A REPLY

Please enter your comment!
Please enter your name here