ಶ್ರೀರಾಮ ವಿದ್ಯಾಲಯಕ್ಕೆ ಘೋಷ್ ವಾದನಗಳ ಸಮರ್ಪಣೆ

0

ಉಪ್ಪಿನಂಗಡಿ: ಶ್ರೀರಾಮ ವಿದ್ಯಾಲಯ ಸೂರ್ಯ ನಗರ ನೆಲ್ಯಾಡಿ ಇದರ ಸದ್ವಿಚಾರ ಕಾರ್ಯಕ್ರಮ ಅಂಗವಾಗಿ “ಜ್ಞಾನಮಯ ಪ್ರದೀಪ” ಮತ್ತು ಘೋಷ್ ವಾದನಗಳ ಸಮರ್ಪಣೆಯ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.‌


ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯರವರು ವಿದ್ಯಾಲಯಕ್ಕೆ ಘೋಷ್ ವಾದನಗಳನ್ನು ಕೊಡುಗೆಯಾಗಿ ಹಾಗೂ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಪುಸ್ತಕಗಳನ್ನು ಉಚಿತವಾಗಿ ನೀಡಿ , ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಂಸ್ಕಾರ ಮತ್ತು ಕ್ಷಾತ್ರ ತೇಜಸ್ಸನ್ನು ಅಳವಡಿಸಿಕೊಂಡು ಜೀವನದಲ್ಲಿ ಎದುರಾಗುವ ಯಾವುದೇ ಅಡೆತಡೆಗಳನ್ನು ಎದುರಿಸಿ ಭಾರತಾಂಬೆಯ ಪುತ್ರರತ್ನರಾಗಿ ಕಂಗೊಳಿಸಬೇಕೆಂದು ತಿಳಿಸಿದರು.‌


ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಬ್ರಾಯ ನಂದೋಡಿಯವರು ಭಗವದ್ಗೀತಾ ಪಾರಾಯಣ ನಡೆಸಿ, ಭಗವದ್ಗೀತಾ ಸಂದೇಶವನ್ನು ನೀಡಿದರು.
ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೂಲಚಂದ್ರ ಕಾಂಚನ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಜಯಂತ ಪೋರೋಳಿಯವರು ಉಪಸ್ಥಿತರಿದ್ದರು.
ಆಡಳಿತ ಸಮಿತಿ ಸದಸ್ಯರಾದ ಸುಬ್ರಾಯ ಪುಣಚ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶುಭ ರಾಣಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ಕಾವ್ಯ ಮಾತಾಜಿ ಅತಿಥಿಗಳನ್ನು ಸ್ವಾಗತಿಸಿ, ಗಣೇಶ್ ವಾಗ್ಲೆ ವಂದಿಸಿದರು.

LEAVE A REPLY

Please enter your comment!
Please enter your name here