





ಪುತ್ತೂರು: 2024-25ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ಪಟ್ಟೆ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಬಾಲಕರ ಗುಂಡು ಎಸೆತ ಸ್ಪರ್ಧೆಯಲ್ಲಿ ಬೆಳಂದೂರು ಈಡನ್ ಗ್ಲೋಬಲ್ ಶಾಲೆಯ ಮುಹಮ್ಮದ್ ನಿಹಾದ್ ಪ್ರಥಮ ಸ್ಥಾನ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಅಬ್ದುಲ್ ಶಹದ್ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 17ರ ವಯೋಮಿತಿಯ ಬಾಲಕರ ಗುಂಡು ಎಸೆತ ಸ್ಪರ್ಧೆಯಲ್ಲಿ ಜವಾದ್ ದ್ವಿತೀಯ ಸ್ಥಾನ ಹಾಗೂ ಚಕ್ರ ಎಸೆತ ವಿಭಾಗದಲ್ಲಿ ಇಹಸ್ಸಾನ್ ಬಿನ್ ಇಬ್ರಾಹಿಂ ತೃತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಡನ್ ಗ್ಲೋಬಲ್ ಶಾಲೆಯ ಪ್ರಿನ್ಸಿಪಾಲ್ ರಂಝಿ ಮುಹಮ್ಮದ್ ಹಾಗೂ ಶಾಲೆಯ ಆಡಳಿತ ಸಮಿತಿಯು ಮಕ್ಕಳನ್ನು ಅಭಿನಂದಿಸಿದರು. ಶ್ವೇತಾ ಕುಮಾರಿ ಹಾಗೂ ಇಮ್ತಿಯಾಝ್ ಸಿ ಎಂ ತರಬೇತುದಾರರಾಗಿದ್ದಾರೆ.









