ಪುತ್ತೂರು: ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಸಜ್ಜನ ಪ್ರತಿಷ್ಠಾನ ಸಹಯೋಗದೊಂದಿಗೆ ಶಿಕ್ಷಕಿಯರಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿದ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಅಧ್ಯಕ್ಷ, ಮಧುರಾ ಸ್ಕೂಲ್ ಆಡಳಿತ ನಿರ್ದೇಶಕ ಆದ ಡಾ. ಉಮ್ಮರ್ ಬೀಜದಕಟ್ಟೆಯವರು ಶಿಕ್ಷಕರ ತರಬೇತಿಯ ಅಗತ್ಯದ ಬಗ್ಗೆ ಮನದಟ್ಟು ಮಾಡಿಕೊಟ್ಟರು. ತಂತ್ರಜ್ಞಾನವು ಅಭಿವೃದ್ಧಿಯಾದಂತೆ ತರಗತಿ ನಡೆಸುವ ಕೌಶಲ್ಯ ಅಭಿವೃದ್ಧಿ ಆಗಬೇಕಾಗಿದೆ. ಮಕ್ಕಳ ಪೋಷಕರ ಮತ್ತು ಆಡಳಿತ ಮಂಡಳಿಯ ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ತರಗತಿ ನಡೆಸುವ ಕೌಶಲ್ಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತರಬೇತಿ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶರೀಫ್ ಸುಳ್ಯ, ಅಡ್ವೋಕೇಟ್ ಮಂಜುನಾಥ್, ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್, ಅಡ್ಮಿನ್ ಆಫೀಸರ್ ನಾಸೀರ್ ಹಾಗೂ ಮ್ಯಾನೇಜರ್ ರೈಹಾನ ಉಪಸ್ಥಿತರಿದ್ದರು. ಪ್ರಾಂಶುಪಾಲ ರಾಜೀಶ್ ಕುಮಾರ್ ಸ್ವಾಗತಿಸಿ ವಂದಿಸಿದರು.