ಪುತ್ತೂರು: ಅ.22ರಂದು ಪಟ್ಟೆ ಶಾಲೆಯಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.32 ವಿದ್ಯಾರ್ಥಿಗಳು ಭಾಗವಹಿಸಿದ್ದು ಹಲವು ಪ್ರಶಸ್ತಿಗಳೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17ರ ವಯೋಮಾನ ಬಾಲಕರ ವಿಭಾಗದಲ್ಲಿ ಕೀರ್ತನ್ 10 ನೇ ತರಗತಿ ಚಕ್ರ ಎಸೆತ ಪ್ರಥಮ, ಈಟಿ ಎಸೆತ ತೃತೀಯ,ಮಹಮ್ಮದ್ ಆಶೀಲ್ 10ನೇ ತರಗತಿ ತ್ರಿವಿಧ ಜಿಗಿತ ಪ್ರಥಮ, ಚಕ್ರ ಎಸೆತ ದ್ವಿತೀಯ, 4*400 ರಿಲೇ ತೃತೀಯ ಹೇಮಂತ್ 10ನೇ ತರಗತಿ 4*100 ರಿಲೇ ಪ್ರಥಮ, 4* 400 ರಿಲೇ ತೃತೀಯ, ಈಟಿ ಎಸೆತ ದ್ವಿತೀಯ ತ್ರಿವಿಧ ಜಿಗಿತ ತೃತೀಯ, ಮಹಮ್ಮದ್ ಸುಹೈಬ್ 10 ನೇತರಗತಿ 4*100 ರಿಲೇ ಪ್ರಥಮ, ಉದ್ದ ಜಿಗಿತ ದ್ವಿತೀಯ, 4*400 ರಿಲೇ ತೃತೀಯ, ಮಹಮ್ಮದ ಅಮೀನ್ 10 ನೇತರಗತಿ 4*100 ರಿಲೇ ಪ್ರಥಮ ೪*400 ರಿಲೇ ತೃತೀಯ ನಿತಿನ್ 9 ನೇತರಗತಿ 4*100 ರಿಲೇ ಪ್ರಥಮ, 17 ರ ವಯೋಮಾನ ಬಾಲಕಿಯರ ವಿಭಾಗ ಆತ್ಮಿ ಎನ್ 10 ನೇ ತರಗತಿ 100 ಮೀ ದ್ವಿತೀಯ, 200 ಮೀ ದ್ವಿತೀಯ, 4*400 ರಿಲೇ ತೃತೀಯ .ಯಶ್ಮಿತಾ 10 ನೇ ತರಗತಿ ತ್ರಿವಿಧ ಜಿಗಿತ ದ್ವಿತೀಯ, ವರ್ಷಾ 9 ನೇ ತರಗತಿ 400 ಮೀ ತೃತೀಯ, 4*400 ರಿಲೇ ತೃತೀಯ, ನೂತನ 9 ನೇ ತರಗತಿ ತ್ರಿವಿಧ ಜಿಗಿತ ತೃತೀಯ, ಅಸ್ಲಾ ಫರ್ಹಾ 10 ನೇ ತರಗತಿ 4*400 ರಿಲೇ ತೃತೀಯ ಫಾತಿಮತ್ ಹಸೀನಾ 9 ನೇ ತರಗತಿ 4*400 ರಿಲೇ ತೃತೀಯ, 14ರ ವಯೋಮಾನ ಬಾಲಕಿಯರ ವಿಭಾಗ
ಆಯಿಷತ್ ಸನಾ 8 ನೇತರಗತಿ 400 ಮೀ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿಉಮಾವತಿ ಎಲ್ ತಿಳಿಸಿದ್ದಾರೆ. ಶಾಲಾ ದೈ.ಶಿ.ಶಿಕ್ಷಕ ಸಹದೇವ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.