ಪುತ್ತೂರು:ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ರವರ 300ನೇ ಜಯಂತಿ ಪ್ರಯುಕ್ತ ಕಾರ್ಯಕ್ರಮವನ್ನು ರಾಷ್ಟ್ರಸೇವಿಕಾ ಸಮಿತಿ ಪುತ್ತೂರು ಘಟಕ ವತಿಯಿಂದ ನಡೆಸಲಾಯಿತು.
ಮೀನಾಕ್ಷಿ ಅವರು ಮಾತನಾಡಿ “ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯ ತುಂಬುವ ನಿಟ್ಟಿನಲ್ಲಿ ಅಹಲ್ಯಾಬಾಯಿಯ ಸಮಗ್ರ ಜೀವನ ಚರಿತ್ರೆಯನ್ನು ತಿಳಿಸಿಕೊಡುತ್ತಾ ಅವರ ಧಾರ್ಮಿಕ ಸಮಷ್ಟಿಚಿಂತನೆ,ಕತೃತ್ವ,ನೇತೃತ್ವ,ಸಾಮಾಜಿಕ,ರಾಜಕೀಯ ಚಿಂತನೆಗಳು ಮೊದಲಾದವುಗಳನ್ನು ಉದಾಹರಣೆ ಸಹಿತ ವಿವರಿಸುತ್ತಾ ಬದುಕುವುದಕ್ಕೂ ಬಾಳುವುದಕ್ಕೂ ಇರುವ ವ್ಯತ್ಯಾಸಗಳನ್ನು ತಿಳಿಸುತ್ತಾ ಸಮಾಜಕ್ಕಾಗಿ ರಾಷ್ಟ್ರಕ್ಕಾಗಿ ನಮ್ಮ ಸಮರ್ಪಣಾ ಭಾವದ ಹೆಜ್ಜೆಯನ್ನು ಇಡೋಣ ಎಂದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರಾದ ಪ್ರಶಾಂತ್ ಕೆ. ಇವರು ನೆರವೇರಿಸಿದರು.