ಕಡಬ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘದ ’ಸೌಭಾಗ್ಯ ಸಹಕಾರ ಸೌಧ’ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಸಿಎಂ, ಡಿಸಿಎಂ, ಶಾಸಕರಿಗೆ ಮನವಿ

0

ಕಡಬ: ಕಡಬದ ಎಸ್‌ಆರ್‌ಕೆ ಟವರ್ಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘದ ಸ್ವಂತ ನಿವೇಶನದಲ್ಲಿ ’ಸೌಭಾಗ್ಯ ಸಹಕಾರ ಸೌಧ’ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ವಿಶೇಷ ಅನುದಾನ, ಇತರ ಅನುದಾನಗಳು ಹಾಗೂ ವೈಯಕ್ತಿಕ ಅನುದಾನ ನೀಡುವಂತೆ ಕೋರಿ ಸಂಘದ ಅಧ್ಯಕ್ಷ ಬಾಲಚಂದ್ರ ಎಚ್., ಅವರು ಬೆಂಗಳೂರು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.


ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘವು ಕರ್ನಾಟಕ ರಾಜ್ಯದ ಕಾರ್ಯವ್ಯಾಪ್ತಿಯಲ್ಲಿ ಸಹಕಾರ ಇಲಾಖೆಯ ಮೂಲಕ ನೊಂದಾವಣೆಗೊಂಡಿದ್ದು ಸಂಘದಲ್ಲಿ ವಿಕಲಚೇತನರೇ ಸದಸ್ಯರಾಗಿದ್ದು ಒಟ್ಟು 5429 ವಿಕಲಚೇತನ ಸದಸ್ಯರಿದ್ದಾರೆ. 1,13,86,811 ರೂ.ಬಂಡವಾಳದ ಮೂಲಕ ವ್ಯವಹಾರಗಳನ್ನು ನಡೆಸಿಕೊಂಡು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಸಂಘದ ಪ್ರಧಾನ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸಂಘದಲ್ಲಿ ಸದಸ್ಯರು ಯೋಜನೆ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಲು ನೋಂದಾವಣೆ ಮಾಡಿಕೊಳ್ಳುತ್ತಿರುವುದರಿಂದ ಸ್ವಂತ ಪ್ರಧಾನ ಕಚೇರಿಯ ಕಟ್ಟಡದ ಅವಶ್ಯಕತೆ ಇರುವ ಕಾರಣ ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯ ಕೈಗೊಂಡು ಕಡಬ ಪಟ್ಟಣ ವ್ಯಾಪ್ತಿಯಲ್ಲಿ ನಮೂನೆ 3ರ ಅಡಿಯಲ್ಲಿ ನೋಂದಾವಣೆಗೊಂಡಿರುವ ಜಾಗ ಗುರುತಿಸಿದ್ದು ನೂತನ ಕಟ್ಟಡದ ನೀಲಿನಕ್ಷೆ ತಯಾರಿಸಲಾಗಿದೆ. ಈ ಕಟ್ಟಡಕ್ಕೆ ಅಂದಾಜು 6 ಕೋಟಿ ರೂ.ಅವಶ್ಯಕತೆ ಇರುವುದರಿಂದ ವಿಕಲಚೇತನರೇ ಆದ ನಮ್ಮ ಸಹಕಾರ ಸಂಘದ ಸಾಮಾನ್ಯ ಸದಸ್ಯರಿಂದಲೇ ಭರಿಸಲು ಕಷ್ಟಕರವಾಗಿರುತ್ತದೆ. ಆದ್ದರಿಂದ ನಮಗೆ ಸರಕಾರದ ಮೂಲಕ ವಿಶೇಷ ಅನುದಾನ, ಇತರ ಅನುದಾನ, ವೈಯಕ್ತಿಕ ಅನುದಾನಗಳ ಮೂಲಕ ಅಥವಾ ಇಲಾಖೆ ವತಿಯಿಂದ ಅನುದಾನ ಮಂಜೂರು ಮಾಡಿ ಕರ್ನಾಟಕ ರಾಜ್ಯದಲ್ಲಿ ವಿಕಲಚೇತನರು ಸಮಾಜದ ಮುಖ್ಯವಾಹಿನಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದಲ್ಲಿ ಸಾಮಾನ್ಯ ಜನರಂತೆ ಬೆಳಗುವಲ್ಲಿ ನಮ್ಮ ಉದ್ದೇಶ ಮತ್ತು ಯೋಜನೆಯನ್ನು ಹಾಗೂ ಮನವಿಯನ್ನು ಪುರಸ್ಕರಿಸಿ ಅನುದಾನ ಮಂಜೂರು ಮಾಡುವಂತೆ ಬಾಲಚಂದ್ರ ಹೆಚ್.ಅವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here