ಕಡಬ: ರಾಷ್ಟ್ರೀಯ ಸ್ವಯಂಸೇವಕ ಸಂಘ ಇದರ ಸಾಮರಸ್ಯ ಮಂಗಳೂರು ವಿಭಾಗ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಕಡಬ ಗ್ರಾಮದ ಮಜ್ಜೆಗುಡ್ಡೆ ಕಾಲೋನಿಯಲ್ಲಿ ತುಡರ್ ಸಾಮರಸ್ಯದ ಜ್ಯೋತಿ ಕಾರ್ಯಕ್ರಮ ಅ.27ರಂದು ನಡೆಯಿತು.
ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದಿಂದ ದೀಪ ಜ್ಯೋತಿಯೊಂದಿಗೆ ಮಜ್ಜಗುಡ್ಡೆ ಕಾಲೋನಿಗೆ ಆಗಮಿಸಿದ ಪ್ರಮುಖರು ಮಜ್ಜಗುಡ್ಡೆಯ ಸುಮಾರು 12 ಮನೆಗಳಲ್ಲಿ ದೀಪ ಪ್ರಜ್ವಲಿಸಲಾಯಿತು. ಬಳಿಕ ಚೋಂಕ್ರ ಎಂಬವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾ.ಸ್ವ.ಸೇ.ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನ. ಸೀತಾರಾಮ ರವರು ಸಾಮಾರಸ್ಯದ ತುಡರ್ ಬಗ್ಗೆ ಮಾತನಾಡಿ, ಜಗತ್ತಿನಲ್ಲಿ ಅತ್ಯಂತ ಶ್ರೇಷ್ಟ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ಹಲವಾರು ಅನಿಷ್ಟ ಪದ್ದತಿ, ಆಚರಣೆಗಳನ್ನು ಕೈ ಬಿಡಲಾಗಿದ್ದು ಅದರಂತೆ ಇಂದಿಗೂ ಉಳಿದಿರುವ ಅಸ್ಪೃಶ್ಯತೆ ಎಂಬ ಮಹಾ ಪಿಡುಗನ್ನು ಹೊಗಲಾಡಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಯತ್ನಿಸುತ್ತಿದ್ದು, ಇದರ ಭಾಗವೇ ಸಾಮಾರಸ್ಯ ವೇದಿಕೆ, ಈ ವೇದಿಕೆಯ ಮೂಲಕ ಯಾರು ಮೇಲು, ಕೀಳು ಇಲ್ಲ ಎಲ್ಲಾ ಹಿಂದೂಗಳು ಸಮಾನರು ಇವರನ್ನು ಒಗ್ಗಟ್ಟಿನಿಂದ ಕೊಂಡೊಯ್ಯಲು ಪ್ರಯತ್ನಿಸುತ್ತಿದೆ. ನಾವು ಕೀಳರಿಮೆ ಮತ್ತು ದುಶ್ಟಟಗಳನ್ನು ಬಿಡಬೇಕು ಆ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಕೊಳ್ಳಬೇಕು ಎಂದರು.
ಸಾಮಾರಸ್ಯದ ಜಿಲ್ಲಾ ಸಹ ಸಂಯೋಜಕ ರವೀಶ್ ಪಡುಮಲೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಮೇಶ್ ಗೋಳಿಯಡ್ಕ ಆಶಯ ಗೀತೆ ಹಾಡಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಾಣಧಿಕಾರಿ ವೆಂಕಟ್ರಮಣ ಮಂಕುಡೆ, ಪ್ರಮುಖರಾದ ರವಿರಾಜ ಶೆಟ್ಟಿ ಕಡಬ, ಕೃಷ್ಣ ಶೆಟ್ಟಿ ಕಡಬ, ನವೀನ್ ನೆರಿಯ, ಶ್ರೀಕೃಷ್ಣ ಎಂ. ಆರ್, ವಾಸುದೇವ ಭಟ್ ಕಡ್ಯ, ಪ್ರಮೋದ್ ಕುಮಾರ್ ನಂದುಗುರಿ, ಮಹೇಶ್ ರೈ ಕುಂಟೋಡಿ, ಪ್ರಮೀಳಾ ಲೋಕೇಶ್, ಸುಜಿತ್ ಕುಂಡಡ್ಕ, ಅಜಿತ್ ರೈ, ಸಾಮರಸ್ಯದ ಮಂಗಳೂರು ವಿಭಾಗದ ಸಹ ಸಂಯೋಜಕ ಶಿವಪ್ರಸಾದ್ ಮಲೆಬೆಟ್ಟು, ಹೇಮಚಂದ್ರ ಮರ್ಕಂಜ, ಸಾಮರಸ್ಯ ದ ಪುತ್ತೂರು ಜಿಲ್ಲೆಯ ಸಂಯೋಜಕ ಸುಧಾಕರ ಶೆಟ್ಟಿ, ಸಾಮರಸ್ಯದ ಪುತ್ತೂರು ಜಿಲ್ಲೆಯ ಸಹ ಸಂಯೋಜಕ ಶ್ರೀಕುಮಾರ್ ಹಾಗೂ ಮಜ್ಜಗುಡ್ಡೆ ಕಾಲೋನಿಯಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೋಮಾತೆಗೆ ದೀಪರಾತಿ ಬೆಳಗಿಸಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಬಳಿಕ ಚೋಂಕ್ರ ಅವರ ಮನೆಯಲ್ಲಿ ಸಹಭೋಜನ ನಡೆಯಿತು.