ನೀರಿಗೆ ಜೀವನ ಎಂಬ ಹೆಸರಿದೆ. ನೀರಿಲ್ಲದೆ ಯಾವ ಪ್ರಾಣಿಯೂ ಬದುಕಲಾರದು ಮನುಷ್ಯರಿಗಂತೂ ನೀರು ಕುಡಿಯಲು ಮಾತ್ರವಲ್ಲ ದೇಹ ಶುದ್ದಿಗೂ ಬೇಕು ನೀರಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ ಹಸಿವೆಯನ್ನು ತಸು ಪ್ರಯತ್ನದಿಂದ ತಡೆದುಕೊಳ್ಳಬಹುದು ಆದರೆ ಬಾಯಾರಿಕೆಯನ್ನು ಸಹಿಸುವುದು ಸುಲಭ ಸಾಧ್ಯವಲ್ಲ ಸಕಲ ಜೀವರಾಶಿಗಳಿಗೂ ನೀರಿನಿಂದಲೇ ಪ್ರಾಣ ಧಾರಣೆ. ಈ ಭೂಮಿಯು ಮುಕ್ಕಾಲು ಭಾಗ ನೀರಿ ಆವರಿಸಿದೆ ನಮ್ಮ ದೇಹದಲ್ಲೂ ಮುಕ್ಕಾಲು ಪಾಲು ರಕ್ತ ರೂಪದಿಂದ ನೀರೇ ಇದೆ ಬೆಟ್ಟದ ತುದಿಯಲ್ಲಿ ಹುಟ್ಟುವ ನದಿಗಳು ಹರಿಯುವುದನ್ನು ನಾವು ಕಾಣುತ್ತೇವೆ ಕಾಣದಿರುವ ಅಸಂಖ್ಯಾತ ನೀರಸೆಗಳು ಭೂಮಿಯ ಬಸರಿನ ಉಳಿವೆ ನೀರು ನಮಗೆ ಮಾತ್ರವಲ್ಲ ನಮ್ಮ ದೇವರುಗಳಿಗೂ ಅತ್ಯಂತ ಪ್ರಿಯ.
ಅರ್ಚಕರ ಅಭಿಷೇಕದಿಂದ ಪರಿಶುದ್ಧವಾಗದೆ ಯಾವ ದೇವ ದೇವಿಯರು ದರುಶನ ನೀಡುವುದಿಲ್ಲ. ನಮ್ಮ ನಾರಾಯಣ ಶರಧಿಶಯನ ಶಿವ ಗಂಗಾಧರ ಬ್ರಹ್ಮ ಸದಾ ನೀರಿನಲ್ಲಿರುವ ಹಂಸವಾಹನ ಲಕ್ಷ್ಮಿ ಸಮುದ್ರದಿಂದ ಹುಟ್ಟಿದ್ದಾಕೆ ಗೌರಿಗಂಗೆಯ ಸಹೋದರಿ ನೀರು ನಮಗೆ ಕೇವಲ ಶರೀರದ ಶೌಚಕ್ಕೆ ಉಪಯೋಗಿಸುವ ದ್ರವ್ಯವಲ್ಲ ಗಂಗಾ ಮಾತೆ. ಕುಡಿಯುವ ನೀರು ಮತ್ತು ಸ್ನಾನದ ನೀರು ಪರಿಶುದ್ಧವಾಗಿರಬೇಕು ಅದಕ್ಕಾಗಿ ಹಿಂದಿನ ಕಾಲದಲ್ಲಿ ಅಪರಿಚಿತರು ಬಾವಿ ಮುಟ್ಟುವುದು ನಿಶಿದ್ದ ಬಾವಿಕಟ್ಟೆಯ ಬಳಿ ಸ್ನಾನವು ನಿಷಿದ್ಧ ಅತಿಸಾರ ಜೀರ್ಣ ಕಾಲರಗಳು ಅಶುದ್ಧ ನೀರಿನ ಸೇವನೆಯಿಂದ ಉಂಟಾಗುತ್ತದೆ ಅಶುದ್ಧ ನೀರಿನ ಸ್ನಾನದಿಂದ ಕಜ್ಜಿ ಕುರು ಮುಂತಾದ ಚರ್ಮರೋಗಗಳು ಉಂಟಾಗುತ್ತವೆ ಎಂದು ಆಯುರ್ವೇದ ಹೇಳುತ್ತದೆ ಅಷ್ಟೇ ಅಲ್ಲ ಕಾಮಲೆ ಬಾವು ದಮ್ಮು ನೆಗಡಿ ಹೊಟ್ಟೆ ನೋವು ಜಲೋದರ ಇತ್ಯಾದಿ ರೋಗಗಳಿಗೂ ಕೆಟ್ಟ ನೀರಿನ ಸೇವನೆಯಿಂದ ಬರುತ್ತದೆ ಆದುದರಿಂದ ನಮ್ಮ ಹಿರಿಯರು ನೀರಿನ ಪರಿಶುದ್ಧತೆಯ ಬಗೆಗೆ ಇನ್ನಿಲ್ಲದ ಕಾಳಜಿ ವಹಿಸಿದರು ದೈವಿಕತೆಯನ್ನು ಆರೋಪಿಸಿದರು ಮನೆಯ ಮುಂದೆಯೇ ಬಾವಿ ತೋಡಿ ನೀರು ಅತ್ಯಂತ ಖಾಸಗಿ ಆಸ್ತಿ ಎಂಬಂತೆ ನಡೆದುಕೊಂಡರು ನೀರನ್ನು ಕಲಶದೊಳಗಿಟ್ಟು ಪೂಜಿಸಿದರು ಯಾವುದೇ ವಸ್ತುವಿನ ಮೇಲೆ ಪೂಜ್ಯ ಭಾವನೆ ಇರಿದಾಗ ಅದು ಪರಿಶುದ್ಧತೆಯನ್ನು ಕಾಪಾಡುವುದು ಸುಲಭವಾಗುವುದು ಆದುದರಿಂದಲೇ ನೀರನ್ನು ಪೂಜ್ಯ ಭಾವನೆಯಿಂದ ಕಂಡು ಅದರ ಪವಿತ್ರತೆಯನ್ನು ಕಾಪಾಡಲು ಧಾರ್ಮಿಕ ವಿಧಿ ವಿಧಾನಗಳಿಗೆ ಹತ್ತಿರವಾಗಿಸಿದರು ಆದುದರಿಂದ ನಮ್ಮ ದೇಶದಲ್ಲಿ ನೀರು ತುಂಬುವುದು ಒಂದು ಹಬ್ಬ ಇದು ಕೇವಲ ಸಂತೋಷ ಸಂಭ್ರಮಗಳಿಂದ ಮೈ ಮರೆಯಲು ಮಾತ್ರ ಸೀಮಿತವಾಗ ಕೂಡದು ಆಶಯವನ್ನು ಅರಿಯುವಂತಾಗಬೇಕು.
ನೀರಿನ ಮಹತ್ವದ ಬಗ್ಗೆ ಉತ್ತಮವಾದ ಲೇಖನ ಕಬ್ಬಿನ ಕೋಲು 63ನೇ ಪುಟದಲ್ಲಿ ನೀರು ಹಂಡೆಗೆ ಮಾತ್ರ ತುಂಬಿಸುವುದಲ್ಲ ನಮ್ಮ ಮಂಡೆಯಲ್ಲಿಯೂ ನೀರಿನ ಕಾಳಜಿ ಪ್ರೀತಿ ಮತ್ತು ಗೌರವ ಬೇಕು.. ನದಿಗಳ ಪುಸ್ತಕದಲ್ಲಿ ಬನ್ನಂಜೆ ಗೋವಿಂದ ಆಚಾರ್ಯರು ಹೇಳಿದ್ದಾರೆ ಭಾರತೀಯರಿಗೆ ನೀರು ಜಡವಲ್ಲ ಅದರಲ್ಲಿ ಪೂಜೆ ಭಾವನೆ ಉಂಟು. ಕೃಷ್ಣನನ್ನು ಸ್ನಾನ ಮಾಡಿಸಿದಂತಹ ದಿನ ಎಷ್ಟು ಮಹತ್ವದ ದಿನ. . ಈ ದಿನ ಸಂಬಂಧವನ್ನು ಗಟ್ಟಿಗೊಳಿಸುವ ದಿನವಾಗಿದೆ ಇನ್ನು ಸತಿ ಪತ್ನಿಯನ್ನು ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡಿಸ್ತಾಳೆ ಇದು ಸತಿಪತಿಯರ ಪ್ರೇಮವನ್ನು ಅಭಿವ್ಯಕ್ತಿಸುತ್ತದೆ ಅನ್ಯೋನ್ಯತೆಯ ಸಂಕೇತವು ಆಗಿದೆ.. ನೀರನ್ನು ಹೆಣ್ಣು ಎಂದು ಕರೆಯುತ್ತಾರೆ ಹೆಣ್ಣಿಗೆ ಒಂದು ಹಿರಿಮೆಂಟಲ್ಲ ಅದುವೇ ತಾಯ್ತನ.. ಮಾತ್ರವಲ್ಲ ಮಗುವಿನ ರಕ್ಷಣೆ ಅವಳ ಕರ್ತವ್ಯ ಹಾಗೆ ಮಕ್ಕಳು ತಾಯಿಯನ್ನು ರಕ್ಷಣೆ ಮಾಡಬೇಕು ಎಲ್ಲದಕ್ಕೂ ಆಧಾರಭೂತವಾಗಿರುವುದು ನೀರು ನೀರಿನ ಮಹತ್ವ ಬರೆ ಸ್ನಾನ ಮಾಡುವುದಲ್ಲ ಹಂಡೆಯಲ್ಲಿ ತುಂಬಿಸುವುದಲ್ಲ ಯಾವುದೇ ಆಚಾರವನ್ನು ಮಾಡುವಾಗ ಅದರ ಹಿಂದೆ ಇರುವ ಮಹತ್ವವನ್ನು ನಾವು ಗೌರವಿಸಬೇಕು ತಿಳಿದು ಆಚರಿಸಬೇಕು ಇದರ ಸಮಕಾಲಿನ ಮಹತ್ವ ಏನೆಂಬುದನ್ನು ಸಾರು ಬೇಕು. ಈ ಹಬ್ಬ ಯಾಕೆ ಬೇಕು ಎನ್ನುವಂತದ್ದು ತಿಳ್ಕೊಬೇಕು ಅದರೊಳಗಿನ ಅರ್ಥವನ್ನು ಸಂದೇಶವನ್ನು ತಿಳಿದು ನಾವು ಆಚರಿಸಿದಾಗ ಅಳವಡಿಸಿಕೊಂಡಾಗ ಸರ್ವಕಾಲಿಕವಾಗಿಯೂ ಅದು ಸ್ನಾನ ನಾವು ದಿನ ಮಾಡುತ್ತೇವೆ ಹೊರಗಿನವರು ಇದು ನೋಡಿದ್ರೆ ಇದೊಂದು ಮೂಢನಂಬಿಕೆ ಅಂತ ಅಂತ ಕಾಣ್ತದೆ ಹಾಗಾಗಬಾರದು ..ಎಣ್ಣೆ ಅಂತ ಹೇಳಿದ್ರೆ ಅದು ಅವಿಚಿನ್ನ ವಾಗಿರಬೇಕು ಅಂದ್ರೆ ಚಿನ್ನ ತುಂಡಾಗ್ತದೆ ಎಣ್ಣೆ ತುಂಡಾಗುವುದಿಲ್ಲ ಹೆಣ್ಣನ್ನು ತೈಲಧಾರಿಣಿ ಅಂತ ಹೋಲಿಸುತ್ತಾರೆ ಸಂಬಂಧಗಳು ಸದಾ ಸರಪಳಿಯ ಹಾಗೆ ಎಣ್ಣೆಯ ಹಾಗೆ ಇರ್ಲಿ ಎನ್ನುವಂತ ಸಂಕೇತ ನೀರು ತುಂಬುವ ಹಬ್ಬ ಇವತ್ತು ಮತ್ತು ನಾಳೆಗಳೆಂಬುದು ಉತ್ತಮ ಮಾರ್ಗದರ್ಶನವಾಗಿರಲಿ .. ವರ್ತಮಾನ ಮತ್ತು ಭವಿಷ್ಯ. ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ಆರೋಗ್ಯ ತರಲಿ.. ನಮ್ಮೆಲ್ಲರ ಜೀವನದ ಬೆಳಕು ಪ್ರಜ್ವಲಿಸಲಿ ನೀರನ್ನು ಹಿತ ಮಿತವಾಗಿ ಬಳಸೋಣ ನೀರನ್ನು ತೀರ್ಥವೆಂದು ಸ್ವೀಕರಿಸೋಣ ಎನ್ನುತ್ತಾ ಎಲ್ಲರಿಗೂ ದೀಪಾವಳಿ ಈ ಬೆಳಕಿನ ಹಬ್ಬವು ಜೀವನ ಪರ್ಯಂತ ಬೆಳಕನ್ನು ಅನುಗ್ರಹಿಸಲಿ ಎನ್ನುವುದಾಗಿ ಹಾರೈಸುತ್ತೇನೆ .
ಬರಹ: ಪ್ರೇಮ ಕಿಶೋರ್ ಪುತ್ತೂರು