ಪುತ್ತೂರು : ನರೇಂದ್ರ ಪದವಿಪೂರ್ವ ಕಾಲೇಜಿನ ಯುವ ಸಂಸ್ಕಾರ ವಾಹಿನಿಯ 3ನೇ ಯೋಜನೆಯಾಗಿ ಇದೇ ಕಳೆದ ರಕ್ಷಾಬಂಧನದಂದು ಸಮಾಜ ಸೇವೆಯಲ್ಲಿ ತೊಡಗಿರುವ ಹಲವು ಸಂಘ ಸಂಸ್ಥೆ ,ಆಸ್ಪತ್ರೆ , ಹಾಗು ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳಿಗೆ ಸಹೋದರತ್ವದ ಪ್ರತೀಕವಾದ ರಕ್ಷೆ ಯನ್ನು ಕಟ್ಟಿ ಭಾಂದವ್ಯ ಬೆಸೆಯಲಾಯಿತು.
ಹಾಗೆ ಪ್ರೀತಿಯಿಂದ ಕೊಟ್ಟ ಹಣವನ್ನು ಪ್ರಜ್ಞಾ ಆಶ್ರಮಕ್ಕೆ ತೆರಳಿ ಆಶ್ರಮಕ್ಕೆ ಬೇಕಾದ ಕೆಲವು ಅಗತ್ಯ ವಸ್ತು, ಹಣ್ಣುಹಂಪಲು ಹಾಗೂ ದೀಪಾವಳಿ ಪ್ರಯುಕ್ತ ಹಣತೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನುಭಾಗ್, ಕಾಲೇಜಿನ ವಿದ್ಯಾರ್ಥಿ ಪ್ರಮುಖ್ ಸೃಜನ್ ಕೆ ಪಿ ಹಾಗು ಯುವ ಸಂಸ್ಕಾರ ವಾಹಿನಿ ತಂಡದ ಸದಸ್ಯರಾದ ಸುಮನ್ , ಚೈತ್ರೆಶ್,ಸತ್ಯರಾಜ್, ಸುವಿದ್, ಶ್ರ್ಯಾವ್ಯ, ಹರಿಣಿ ಗೌಡ,ಮೌಲಿಕ, ಹರ್ಷಿತಾ ಉಪಸ್ಥಿತರಿದ್ದರು.