87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ನ.8 ರಂದು ಕನ್ನಡ ಜ್ಯೋತಿ ರಥಯಾತ್ರೆ ಪುತ್ತೂರಿಗೆ ಆಗಮನ

0

ಪುತ್ತೂರು: ಡಿಸೆಂಬರ್ 20, 21, 22, ರಂದು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಮ್ಮೇಳನದಲ್ಲಿ ಕನ್ನಡ ಪ್ರೇಮಿಗಳು ಭಾಗಿಯಾಗುವ ನಿಟ್ಟಿನಲ್ಲಿ  ಕನ್ನಡ ಜ್ಯೋತಿ ಹೊತ್ತ ಕನ್ನಡ ಭುವನೇಶ್ವರಿಯ ರಥವು ನ. 8 ರಂದು  ಪುತ್ತೂರಿಗೆ ಆಗಮಿಸಲಿದೆ.

ಅಂದು ಮಧ್ಯಾಹ್ನ 12 ಗಂಟೆಗೆ ಕಬಕ ವೃತ್ತದ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ರಥವನ್ನು ಸ್ವಾಗತಿಸಿ ಅಲ್ಲಿಂದ ಮೆರವಣಿಗೆ ಮೂಲಕ ಸಂಚರಿಸಿ ಮುಖ್ಯ ರಸ್ತೆಯಾಗಿ ಶ್ರೀಧರ್ ಭಟ್ ಅಂಗಡಿ ಬಳಿಯಿಂದ ತಾಲೂಕು ಆಡಳಿತ ಸೌಧಕ್ಕೆ  ಮಧ್ಯಾಹ್ನ ಸುಮಾರು 12:30 ಕ್ಕೆ ತಲುಪಲಿದೆ. ಬಳಿಕ ಸಹಾಯಕ ಆಯುಕ್ತರು, ತಹಸಿಲ್ದಾರ್, ತಾಲೂಕ್ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು, ಪೌರಾಯುಕ್ತರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉತ್ತರ ಪೊಲೀಸ್ ಇಲಾಖೆ , ಉತ್ತರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ರೋಟರಿ, ಲಯನ್ಸ್, ಜೆ ಸಿ ಐ,ಇನ್ನರ್ವಿಲ್, ಹಾಗೂ ಇನ್ನಿತರ  ಸಂಘ ಸಂಸ್ಥೆಗಳು , ಕನ್ನಡ ಪ್ರೇಮಿಗಳು ಸೇರಿ ರಥವನ್ನು ಸ್ವಾಗತಿಸಲಿದ್ದಾರೆ.

ಬಳಿಕ ಕೋರ್ಟು ರಸ್ತೆಯಾಗಿ ಎಪಿಎಂಸಿ ರಸ್ತೆ ಮೂಲಕ ಬೆಳ್ತಂಗಡಿಗೆ ಪುತ್ತೂರು ತಾಲೂಕು ಸರಹದ್ದು ತನಕ ಈ ಕನ್ನಡ ರಥವನ್ನು ಬೀಳ್ಕೊಡಲಾಗುವುದು. ಎಲ್ಲಾ ಕನ್ನಡ ಪ್ರೇಮಿಗಳು ಪುತ್ತೂರಿನ ಎಲ್ಲ ಸಂಘ ಸಂಸ್ಥೆಗಳು,ಕನ್ನಡಪರ ಸಂಘಟನೆಗಳು,  ಸಾರ್ವಜನಿಕರು ಈ ಕನ್ನಡ ರಥವನ್ನು ಸ್ವಾಗತಿಸಲು ಭಾಗವಹಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here