ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡಿರುವ ಕುರಿತು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವರು ಹಾಕಿದ್ದ ಪೋಸ್ಟ್ ಗೆ ‘ಒಂದು ರೂಪಾಯಿಗೆ 15 ಡಾಲರ್ ಯಾವಾಗ ಬರುತ್ತದೆ’ ಎಂದು ಕೇಳಿದಾಗ ಸತ್ಯಯುಗ ಎಂಬ ಫೇಸ್ಬುಕ್ ಖಾತೆಯ ವ್ಯಕ್ತಿ ಪ್ರತಿಕ್ರಿಯಿಸಿ ‘ಅದೆಲ್ಲಾ ಬಿಡಿ. ಟ್ರಸ್ಟ್ ಗಳಿಗೆ ಕಪ್ಪು ಹಣ ಹಾಕಿ, ಬಿಳಿ ಹಣ ಪಡೆಯಬಹುದೇ ಎಂದು ಅಶೋಕ್ ಕುಮಾರ್ ರೈ ಅವರ ಹತ್ತಿರ ಹೋಗಿ ಕೇಳಿ’ ಎಂದು ಬರೆಯುವುದರ ಜತೆಗೆ ಅವಾಚ್ಯ ಶಬ್ದ ಬಳಕೆ ಮಾಡಿ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಸದ್ರಿ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ದೂರು ಸ್ವೀಕರಿಸಿದ್ದಾರೆ.