ಪುತ್ತೂರು ನಗರ: ಒಳಚರಂಡಿ ಕಾಮಗಾರಿ ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳ‌ ಜೊತೆ ಶಾಸಕ ಅಶೋಕ್ ರೈ ಚರ್ಚೆ

0

ಪುತ್ತೂರು : ನಗರಸಭಾ ವ್ಯಾಪ್ತಿಯಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಒಳಚರಂಡಿ‌ ಕಾಮಗಾರಿ ಕುರಿತು ಪುತ್ತೂರು ಶಾಸಕ ಅಶೋಕ್ ರೈ ಅವರು ನಗರಾಡಳಿತ ಇಲಾಖೆ ಪ್ರಮುಖ ಅಧಿಕಾರಿ ಜೊತೆ ಶುಕ್ರವಾರ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ‌ ಒಳಚರಂಡಿ ಕಾಮಗಾರಿ ಕಾರ್ಯಗತಗೊಳಿಸುವ ಬಗ್ಗೆ ಚರ್ಚೆ ನಡೆಸಿದರು.

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ‌ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ನಗರದ ಬೆಳವಣಿಗೆಗೆ ಅಡ್ಡಿಯಾಗಿದೆ.‌ ನಗರದಲ್ಲಿ ಒಳಚರಂಡಿ ಕಾಮಗಾರಿ‌ ಸಮರ್ಪಕವಾಗಿಲ್ಲದ ಕಾರಣ ಇಲ್ಲಿ‌ ಸಮಸ್ಯೆ ಉಂಟಾಗುತ್ತಿದೆ.‌ ಮಳೆಗಾಲದಲ್ಲಿ ಈ‌ ಸಮಸ್ಯೆ ವಿಪರೀತ‌ ಹಂತಕ್ಕೆ‌ ತಲುಪುತ್ತದೆ.‌ ನೀರು ಸಮರ್ಪಕವಾಗಿ ಹರಿದು ಹೋಗುವಲ್ಲಿ ಒಳಚರಂಡಿ‌ ವ್ಯವಸ್ಥೆ ಮಾಡದೇ‌ ಇದ್ದಲ್ಲಿ‌ ಮುಂದಿನ‌ ದಿನಗಳಲ್ಲಿ‌ ಪುತ್ತೂರು‌ ನಗರದಲ್ಲಿ ತೀವ್ರ‌ ಸಮಸ್ಯೆ ಉಂಟಾಗಲಿದೆ.

ನಗರಸಭಾ ವ್ಯಾಪ್ತಿಯಲ್ಲಿ‌ ಒಳಚರಂಡಿ ಕಾಮಗಾರಿಗೆ ಸರಕಾರ‌ ಅನುದಾನ ಒದಗಿಸುವುದಾಗಿ ಭರವಸೆಯನ್ನು‌ ನೀಡಿದ‌ ಹಿನ್ನೆಲೆಯಲ್ಲಿ‌ ನಗರಾಡಳಿತ ಇಲಾಖೆ ಈ ವಿಚಾರದಲ್ಲಿ‌ ಹೆಚ್ಚಿನ‌ ಮುತುವರ್ಜಿ ವಹಿಸುವ ಅಗತ್ಯತೆ ಇದೆ ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆಯನ್ನು ನೀಡಿದರು. ಈ‌ ಸಂದರ್ಭದಲ್ಲಿ‌ ನಗರಾಭಿವೃದ್ದಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಕೆಯುಐಡಿಎಫ್ ಸಿ ಎಂಡಿ ಶರತ್ ಕುಮಾರ್ ಮತ್ತು ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here