ಉಪ್ಪಿನಂಗಡಿ: ಕಸಾಪ ರಥ ಯಾತ್ರೆಗೆ ಸ್ವಾಗತ

0

ಉಪ್ಪಿನಂಗಡಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕನ್ನಡ ಭುವನೇಶ್ವರಿ ರಥವನ್ನು ಉಪ್ಪಿನಂಗಡಿಯ ಗ್ರಾಮ ಪಂಚಾಯತ್ ಕಚೇರಿಯ ಬಳಿ ಪಂಚಾಯತ್ ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಆಶ್ರಯದಲ್ಲಿ ಹೂ ಹಾರ ಹಾಕಿ, ಪುಷ್ಪಾರ್ಚನೆಗೈದು ಸ್ವಾಗತಿಸಲಾಯಿತು.


ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಾಥ್‌ರವರು ರಥಯಾತ್ರೆಯ ಉದ್ದೇಶದ ಬಗ್ಗೆ ಮಾತನಾಡಿದರು. ಈ ಸಂದರ್ಭ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷ ಕರುಣಾಕರ ಸುವರ್ಣ, ಕೋಶಾಧಿಕಾರಿ ಡಾ. ಗೋವಿಂದಪ್ರಸಾದ್ ಕಜೆ, ಸಂಘಟನಾ ಕಾರ್ಯದರ್ಶಿ ನವೀನ್ ಬ್ರಾಗ್ಸ್, ಸದಸ್ಯರಾದ ಅಬ್ದುಲ್ ರಹಿಮಾನ್ ಯುನಿಕ್, ಗ್ರಾ.ಪಂ. ಪಂಚಾಯತ್ ಸದಸ್ಯರಾದ ಧನಂಜಯ ನಟ್ಟಿಬೈಲ್, ಉಷಾ ಮುಳಿಯ, ರಶೀದ್, ಗ್ರಾಮ ಆಡಳಿತಾಧಿಕಾರಿಗಳಾದ ಜಯಚಂದ್ರ, ನರಿಯಪ್ಪ, ಗ್ರಾ.ಪಂ. ಕಾರ್ಯದರ್ಶಿ ಗೀತಾ ಶೇಖರ್ ಪ್ರಮುಖರಾದ ಯತೀಶ್, ಸುರೇಶ್ ಮುಡಿಪು, ಸಿದ್ದಿಕ್ ಕೆಂಪಿ, ಹೇಮಾವತಿ, ಚೈತ್ರಾ, ಆಶಾ, ಶುಭ, ಜ್ಯೋತಿ, ಇಕ್ಬಾಲ್, ಮಹಾಲಿಂಗ, ರಕ್ಷಿತ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here