ಉಪ್ಪಿನಂಗಡಿ: ಇಲ್ಲಿನ 187 ವರ್ಷಗಳ ಇತಿಹಾಸವನ್ನು ಹೊಂದಿರುವ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 2024-27ರ ಸಾಲಿನ ಎಸ್‌ಡಿಎಂಸಿ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ರಾಮನಗರ ಹಾಗೂ ಉಪಾಧ್ಯಕ್ಷರಾಗಿ ಶೀಲಾ ಸಿ.ಎ ಪದವು ಆಯ್ಕೆಯಾಗಿದ್ದಾರೆ.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾಗಿ ಕಲಂದರ್ ಶಾಫಿ ನೆಕ್ಕಿಲಾಡಿ, ಫಾರೂಕ್ ಝಿಂದಗಿ, ಸುನಿಲ್ ಕುಮಾರ್ ದಡ್ಡು, ರವಿ ಪೂಜಾರಿ, ಮೊಯ್ದೀನ್ ಕುಟ್ಟಿ, ಸಂತೋಷ್ ಕುಮಾರ್, ಮುಸ್ತಫಾ ನೆಕ್ಕಿಲಾಡಿ, ರಾಜೇಶ್, ಬಿ. ನಬೀಸಾ, ಪದ್ಮಾವತಿ, ಕೈರುನ್ನೀಸ ಐಡಿಯಲ್, ಅಕ್ಷತಾ ಡಿ., ಗೌತಮಿ, ರಝೀನ, ತಸ್ಲೀಮ, ಮಮತ ಅವರು ಆಯ್ಕೆಯಾದರು.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾ ಲಕ್ಷ್ಮಿ ಪ್ರಭು ಹಾಗೂ ಮಾರ್ಗದರ್ಶಕರಾಗಿ ಆಗಮಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ ಇಲ್ಲಿನ ಶಿಕ್ಷಕಿ ಕವಿತಾ ರವರ ಮಾರ್ಗದರ್ಶನದಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ ನಾಮನಿರ್ದೇಶಿತ ಸದಸ್ಯರುಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ತೌಸೀಫ್ ಯು.ಟಿ. , ಹಿರಿಯ ಶಿಕ್ಷಕ ಗಂಗಾಧರ ಬಿ., ಶಾಲಾ ವಿದ್ಯಾರ್ಥಿ ನಾಯಕ ಜ್ಞಾನೇಶ್, ಪ್ರಾರ್ಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಸಹಾಯಕಿ ಗಾಯತ್ರಿ, ಅಂಗನವಾಡಿ ಶಿಕ್ಷಕಿ ಪದ್ಮಾವತಿಯವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಪದನಿಮಿತ ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ಹನುಮಂತಯ್ಯ ಆಯ್ಕೆಯಾದರು.
ಎಸ್‌ಡಿಎಂಸಿ ರಚನಾ ಸಭೆಯಲ್ಲಿ ಶಾಲಾ ಶಿಕ್ಷಕ ಸಂತೋಷ್ ಸ್ವಾಗತಿಸಿದರು. ಶಿಕ್ಷಕಿ ಕೃಷ್ಣವೇಣಿ ವಂದಿಸಿದರು.