





ಕಡಬ: ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಕಿಶೋರ್ ಶಿರಾಡಿಯವರ ನೇತೃತ್ವದಲ್ಲಿ ನ.15ರಂದು ನಡೆಯುವ ಕಸ್ತೂರಿರಂಗನ್ ವರದಿ ಜಾರಿಯ ವಿರುದ್ಧ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆಯಲ್ಲಿ ಕೊಂಬಾರು ಗ್ರಾಮ ಪಂಚಾಯತ್ ನ ನಾಗರಿಕ ಬಂಧುಗಳು ಜಾತಿ ಮತ ಪಕ್ಷಭೇದ ಮರೆತು ಭಾಗವಹಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನ್ಯಾಯ ಯುತ ಬೇಡಿಕೆಗಳ ಹೋರಾಟಕ್ಕೆ ಶಕ್ತಿ ನೀಡಬೇಕೆಂದು ಕೊಂಬಾರು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್ ಕಟ್ಟೆ ವಿನಂತಿಸಿದ್ದಾರೆ.
















