ಪುತ್ತೂರು:. ನಝೀರ‍್ಸ್ ಡಯಾಬಿಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಸಹಯೋಗದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಉಚಿತ ಕೊಲೆಸ್ಟರಾಲ್, ಇಸಿಜಿ, ಶುಗರ್, HBA1C ತಪಾಸಣೆಯು ನ.14 ರಂದು ಕ್ಲಿನಿಕ್ ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.
ಮಧುಮೇಹ ಹಾಗೂ HBA1C 50 ಮಂದಿ ಫಲಾನುಭವಿಗಳು, ಲಿಪಿಡ್ ಪ್ರೊಫೈಲ್ 30 ಮಂದಿ ಫಲಾನುಭವಿಗಳು ಪಾಲ್ಗೊಂಡು ವೈದ್ಯ ಡಾ.ನಝೀರ್ ಅಹಮದ್ ರವರಲ್ಲಿ ಸೂಕ್ತ ಸಲಹೆ ಸೂಚನೆಯನ್ನು ಪಡೆದುಕೊಂಡರು.