





ಪುತ್ತೂರು: ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ಸಂಘ ನಿ., ತಿಂಗಳಾಡಿ ಇದರ ಆಡಳಿತ ಮಂಡಳಿಯ ಅಯ್ಕೆ ಅವಿರೋಧವಾಗಿ ನಡೆದಿದ್ದು, ನೂತನ ಅಧ್ಯಕ್ಷರಾಗಿ ಹರೀಶ ಪುತ್ತೂರಾಯ ಹಾಗೂ ಉಪಾಧ್ಯಕ್ಷರಾಗಿ ಜಯರಾಮ ಕೆದಿಲಾಯರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.



ಉಳಿದಂತೆ ನಿರ್ದೇಶಕರಾಗಿ ಡಾ|ಸುರೇಶ್ ಪುತ್ತೂರಾಯ, ಶ್ರೀಧರ ಬೈಪಡಿತ್ತಾಯ ಕೆ.ಎಸ್., ಸುಧೀರ್ ಕೃಷ್ಣ ಎಂ ಪಿ., ಕೃಷ್ಣ ಪ್ರಸಾದ ಕೆದಿಲಾಯ, ಗುರುಪ್ರಸಾದ ಕೆ. ಆರ್., ವಿಷ್ಣುಮೂರ್ತಿ ಯಂ., ಪ್ರಕಾಶ ಕುಮಾರ್ ಎನ್., ಪ್ರೀತಿರಾಜ್ ಬಲ್ಲಾಳ್, ಮನೋರಮ ಎಸ್. ಕೆ., ಜಯಲಕ್ಷ್ಮೀ ಟಿ.ಕೆ.ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.





ಚುನಾವಣಾ ಅಧಿಕಾರಿ ಪದ್ಮಾಕ್ಷಿ ಹಾಗೂ ಸಹಾಯಕ ಚುನಾವಣಾಧಿಕಾರಿ ನವೀನ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸುಶ್ಮಾ ಭಟ್ ಸಿಬ್ಬಂದಿ ಚಿದಾನಂದ ಸಹಕರಿಸಿದರು.









