ಪುತ್ತೂರು: ನರಿಮೊಗರು ಗ್ರಾಮದ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ವಾರ್ಷಿಕ ಕ್ರೀಡಾಕೂಟವು ನವಂಬರ್ 14 ಮಕ್ಕಳ ದಿನಾಚರಣೆಯಂದು ಸಂಸ್ಥೆಯ ಭವ್ಯ ಕ್ರೀಡಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ತಂಡವು ಘೋಷ್ ತಂಡದೊಂದಿಗೆ ನಡೆದ ಆಕರ್ಷಕ ಪಥ ಸಂಚಲನದಲ್ಲಿ ಅಧ್ಯಕ್ಷರು ಹಾಗೂ ಗೌರವಾನ್ವಿತರು ಗೌರವ ವಂದನೆ ಸ್ವೀಕರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಆರ್ಯನ್ ಕುಮಾರ್ 7ನೇ ತರಗತಿ, ಭುವನ್ ಕರಂದ್ಲಾಜೆ 9ನೇ ತರಗತಿ, ಹಸ್ತಾ 8ನೇ ತರಗತಿ ರವರು ಕ್ರೀಡಾಜ್ಯೋತಿಯನ್ನು ಅಧ್ಯಕ್ಷ ಜಯರಾಮ ಕೆದಿಲಾಯ ರಿಗೆ ಹಸ್ತಾಂತರಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.
ಮುಖ್ಯ ಅತಿಥಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಪೋಷಕರು ಚಂದ್ರಶೇಖರ ಪನ್ನೆ ಬೆಳ್ಳಾರೆ ಮಾತನಾಡಿ ನಮ್ಮ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗೆ ಹೆಚ್ಚಿನ ಅವಕಾಶ ಇರಲಿಲ್ಲ ಹಾಗೆಯೇ ನಮ್ಮನ್ನು ತಯಾರಿಸುವ ಶಿಕ್ಷಕರು ಇರಲಿಲ್ಲ ಆದರೆ ಇಂದು ಒಳ್ಳೆಯ ತರಬೇತಿ ನೀಡಿ ರಾಜ್ಯ -ರಾಷ್ಟ್ರ ಮಟ್ಟಕ್ಕೆ ಪ್ರತಿಭೆ ತೋರಿಸುವಂತಹ ಅವಕಾಶ ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಟ್ಟಿದ್ದಾರೆ. ಈ ಶಾಲೆ ಶೈಕ್ಷಣಿಕವಾಗಿ ಜೊತೆಗೆ ಸಂಸ್ಕಾರ, ಸಂಸ್ಕೃತಿ, ಪರಂಪರೆ ಯನ್ನು ಉಳಿಸಿಕೊಂಡು ಸಾಧಿಸುತ್ತಾ ಬರುತ್ತಿದೆ. ಈ ಶಾಲೆಯಲ್ಲಿ ತಾಲೂಕು ಮಟ್ಟದ ಕ್ರೀಡೆ ಬಹಳ ಸುಂದರವಾಗಿ ನಡೆದಿದೆ ಇವತ್ತಿನ ಕ್ರೀಡೆಯಲ್ಲಿ ಕ್ರೀಡಾಮನೋಭಾವದಿಂದ ಸೋಲನ್ನು ಒಪ್ಪಿ ಜಯವನ್ನು ಸ್ವೀಕರಿಸುವ ಕಾರ್ಯ ನಡೆಯಲಿ ಸತ್ಪ್ರಜೆಯಾಗಿ ಬೆಳೆಯಿರಿ ಎಂದು ಶುಭ ಹಾರೈಸಿದರು.
ಶಾಲಾ ಅಧ್ಯಕ್ಷರು ಮಕ್ಕಳ ದಿನಾಚರಣೆಯ ಶುಭ ಹಾರೈಸಿ ಕ್ರೀಡೆ ಎಂಬುದು ಒಂದು ಗೆಲ್ಲುವ ಯುದ್ಧ ಸೋತವರಿಗೂ ಕೂಡ ಹೇಗೆ ಗೆಲ್ಲಬಹುದು ಎಂಬುದನ್ನು ಕಲಿಯುವ ಅವಕಾಶವಿದೆ. ಶಕ್ತಿಯನ್ನು ಕಳೆದುಕೊಳ್ಳದೆ ಶಕ್ತಿಯನ್ನು ಸಂಗ್ರಹಿಸುವಂತಹ ಸಾಮರ್ಥ್ಯ ಬೆಳೆಯಲಿ ಎಂದರು.
ಈ ಸಂದರ್ಭದಲ್ಲಿ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್, ಮುಖ್ಯ ಅಥಿತಿ ಚಂದ್ರಶೇಖರ ಪನ್ನೆ , ಆಡಳಿತ ಮಂಡಳಿಯ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯ, ಶಾಲಾ ಮುಖ್ಯಗುರು ಜಯಮಾಲ ವಿ ಎನ್ ರವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ ಎನ್ ರವರು ಸ್ವಾಗತಿಸಿ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ ಸೋಲು, ಗೆಲುವು ಜೀವನದ ಎರಡು ಮುಖಗಳಿದ್ದಂತೆ ಎಷ್ಟು ಸಲ ನಾವು ಸೋಲನ್ನು ಸ್ವೀಕರಿಸುತ್ತೇವೆಯೋ ಅಷ್ಟೇ ಸದೃಢರಾಗುತ್ತೇವೆ ಎಂದರು.
ಶಿಕ್ಷಕ ರವಿಶಂಕರ್ ರವರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ರವರು ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.ದೈಹಿಕ ಶಿಕ್ಷಣ ಶಿಕ್ಷಕಿಯಾದ ಸುದೀಕ್ಷಾ ರವರು ಧನ್ಯವಾದಗೈದರು.
ನಂತರ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.