ಯುವಶಕ್ತಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿ ಆರ್ಥಿಕ ಸಬಲೀಕರಣಕ್ಕೆ ಅವಕಾಶವಾಗಬೇಕು -ಸುಚರಿತ ಶೆಟ್ಟಿ
ಕಾಣಿಯೂರು:ಪರಸ್ಪರ ಸಹಕಾರ ಮನೋಭಾವದೊಂದಿಗೆ ಆರ್ಥಿಕ, ಸಾಮಾಜಿಕ ಸ್ವಾವಲಂಬಿ ಚಿಂತನೆಯಿಂದ ರೂಪುಗೊಂಡ ಸಹಕಾರಿ ರಂಗದ ಬೆಳವಣಿಗೆಯಲ್ಲಿ ಹಿರಿಯ ನೇತಾರರ ಕೊಡುಗೆ ಅಪಾರ.ಪಂಚಾಯತ್ ವ್ಯವಸ್ಥೆಗಳು ಕೂಡ ಸಹಕಾರ ಕ್ಷೇತ್ರದಲ್ಲಿ ಕೈಜೋಡಿಸಿದಾಗ ಸಹಕಾರಿ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಿದೆ ಎಂದು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ಪುತ್ತೂರು ಮತ್ತು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಕಾರದೊಂದಿಗೆ ಇರ್ದೆ- ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ನ.14ರಂದು ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024 ಜಿಲ್ಲಾ ಮಟ್ಟದ ಸಹಕಾರ ಸಪ್ತಾಹವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಸಹಕಾರಿ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಬೇಕಾದರೆ ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು, ಹೊಸ ಹೊಸ ಅನ್ವೇಷಣೆಗಳು ಬರಬೇಕು ಜೊತೆಗೆ ಪಾರದರ್ಶಕವಾದ ದೃಢ ಆಡಳಿತ ಇರಬೇಕು.ಒಂದು ದೇಶದ, ಜಗತ್ತಿನ ವ್ಯವಸ್ಥೆಯಲ್ಲಿ ಅದ್ಭುತವಾದಂತಹ ಅಭಿವೃದ್ಧಿಯನ್ನು ಕಾಣಬೇಕಾದರೆ ಪ್ರತಿ ಸಮುದಾಯದ ಪಾತ್ರ ಅಗತ್ಯ ಎಂದ ಅವರು, ಕೃಷಿಕ ರೈತರ ಸಹಕಾರಿ ಮನೋಧರ್ಮದ ಸಾಧನೆಯ ಕಾರಣಕ್ಕೆ ಅವಿಭಜಿತ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಇವತ್ತು ರಾಜ್ಯದಲ್ಲಿ ಮೊದಲ ಸ್ಥಾನ ಗಳಿಸಿದೆ ಎಂದರು.ಶಿಕ್ಷಣ ಪಡೆದಂತಹ ಯುವಶಕ್ತಿ ವಿಜ್ಞಾನದ ತಾಂತ್ರಿಕ ಮನಸ್ಸಿನೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಉದ್ಯೋಗವನ್ನು ಸೃಷ್ಠಿಸಬೇಕು.ಈ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳ್ಳುವ ಅವಕಾಶಗಳು ಆಗಬೇಕು ಎಂದರು.
ಸಮಾಜದ ಕಟ್ಟಡ ಕಡೆಯ ವ್ಯಕ್ತಿಯ ಆರ್ಥಿಕ ಶಕ್ತಿ ಬಲಪಡಿಸುವ ಶಕ್ತಿ ಸಹಕಾರ ಕ್ಷೇತ್ರಕ್ಕಿದೆ-ರಂಗನಾಥ ರೈ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಯಸ್ ರಂಗನಾಥ ರೈ ಗುತ್ತು ಮಾತನಾಡಿ, ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ, ‘ಸಹಕಾರ ರತ್ನ’ ಎಂ.ಎನ್ ರಾಜೇಂದ್ರ ಕುಮಾರ್ ಮತ್ತು ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಅವರ ಸಲಹೆಯಂತೆ ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಯೋಜಕತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದೆ.ಎಲ್ಲ ಸಹಕಾರ ಬಂಧುಗಳಿಂದ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂದಿದೆ.ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಶಕ್ತಿಯನ್ನು ಬಲಪಡಿಸುವ ಶಕ್ತಿ ಸಹಕಾರ ಕ್ಷೇತ್ರಕ್ಕೆ ಇದೆ ಎಂದರು.
ದೇಶದ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಅನನ್ಯ-ಮಠಂದೂರು:
ಮೆರವಣಿಗೆಯನ್ನು ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ದೇಶ ಅಭಿವೃದ್ದಿಯತ್ತ ಸಾಗಿದೆ ಅಂದರೆ ಸಹಕಾರ ಕ್ಷೇತ್ರದ ಕೊಡಗೆ ಅನನ್ಯವಾದುದು. ಸಹಕಾರಿ ಸಪ್ತಾಹದ ಮುಖಾಂತರ ದೇಶಕ್ಕೆ ಸಹಕಾರಿ ಕ್ಷೇತ್ರದ ಮೂಲಕ ಆರ್ಥಿಕ ಚೈತನ್ಯವನ್ನು ನೀಡಿದಂತಹ, ಸ್ವಾತಂತ್ರ್ಯ ಪೂರ್ವದಲ್ಲಿ ಈ ದೇಶ ಯಾವ ರೀತಿಯಾಗಿ ಆರ್ಥಿಕತೆಯನ್ನು ಹೊಂದಬೇಕು, ಕೃಷಿ ಪತ್ತಿನ ಸಹಕಾರ ಸಂಘದ ಮುಖಾಂತರ ಕೃಷಿಕರ ಬದುಕನ್ನು ಯಾವ ರೀತಿಯಲ್ಲಿ ಹಸನು ಮಾಡಬೇಕು ಎಂಬ ಯೋಚನೆ ಮಾಡಿದಂತಹ ಹಿರಿಯ ಚೇತನವನ್ನು ನೆನಪು ಮಡುವುದು ನಮ್ಮ ಕರ್ತವ್ಯ. ಸಹಕಾರ ಸಂಘಗಳ ಮುಖಾಂತರ ಆರ್ಥಿಕತೆ ಬೆಳವಣಿಗೆಯ ಒಟ್ಟಿಗೆ ಸರ್ವಾಂಗೀಣ ಬೆಳವಣಿಗೆಯಾಗಿದೆ.ಸಹಕಾರ ಸಂಘಗಳು ಕೇವಲ ಹಣಕಾಸಿನ ವ್ಯವಹಾರ ಅಲ್ಲದೇ ವ್ಯವಹಾರಿಕವಾಗಿಯೂ ಒಬ್ಬ ವ್ಯಕ್ತಿಯ ಬದುಕು ಹೇಗಿರಬೇಕು,ಸರಕಾರ ಮಾಡದ್ದನ್ನು ಸಹಕಾರ ಮಾಡಬಹುದೆಂದು ತೋರಿಸಿ ಕೊಟ್ಟಂತಹ ಹತ್ತಾರು ಸಹಕಾರ ಸಂಘಗಳು ನಮ್ಮ ದ.ಕ ಜಿಲ್ಲೆಯಲ್ಲಿದೆ ಎಂದರು.ಸರಕಾರಗಳು ರೈತರ ಕಷ್ಟ, ನಷ್ಟವನ್ನು, ಪ್ರಾಕೃತಿಕ ವಿಕೋಪವನ್ನು ನೋಡಿ ರೈತರ ಸಾಲಮನ್ನಾ, ಬಡ್ಡಿ ಮನ್ನಾ ಮಾಡುವ ಸಂಗತಿ ಮಾಡುತ್ತಿವೆ.ಅದರೊಟ್ಟಿಗೆ ಇವತ್ತು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಕೊಡುತ್ತಾ ಇದೆ.ಒಂದಷ್ಟು ಕೃಷಿಕರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಸರಕಾರದ ಸವಲತ್ತನ್ನು ಕೊಡ ಮಾಡುವ ಜೊತೆಯಲ್ಲಿ ಇವತ್ತು ಆರ್ಥಿಕತೆಯ ವಿಚಾರಕ್ಕೆ ಒತ್ತು ಕೊಟ್ಟು ಇನ್ನಷ್ಟು ಸಹಕಾರ ಸಂಘವನ್ನು ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.
ಸಹಕಾರ ಕ್ಷೇತ್ರವನ್ನು ಬಲಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ-ಪ್ರಸಾದ್ ಕೌಶಲ್ ಶೆಟ್ಟಿ:
ಧ್ವಜಾರೋಹಣ ನೆರವೇರಿಸಿದ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್‌ಕೌಶಲ್ ಶೆಟ್ಟಿ ಮಾತನಾಡಿ ಸಹಕಾರಿ ಸಂಘ, ಸಹಕಾರಿ ರಂಗ, ಸಹಕಾರಿ ಕ್ಷೇತ್ರದ ಪ್ರತಿಯೊಬ್ಬರು ಕೂಡ ಸಹಕಾರ ಸಪ್ತಾಹವನ್ನು ಅತ್ಯಂತ ಸಂತೋಷದಿಂದ ಆಚರಿಸುವ ಹಬ್ಬ.ಇಂದು ಸಹಕಾರ ಕ್ಷೇತ್ರವು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರೆ ಅದು ಹಿರಿಯ ಸಹಕಾರಿ ಚೇತನರಿಂದ ಸಾಧ್ಯವಾಗಿದೆ. ಸಹಕಾರಿ ಕ್ಷೇತ್ರವನ್ನು ಉಳಿಸಿ ಇನ್ನಷ್ಟು ಬಲಪಡಿಸುವ ಮಹತ್ತರ ಜವಾಬ್ದಾರಿ ಎಲ್ಲರಲ್ಲಿಯೂ ಇದೆ ಎಂದರು.
ಸಹಕಾರ-ಸಂಘಟನೆ ಒಂದೇ ನಾಣ್ಯದ ಎರಡು ಮುಖಗಳು-ಎಸ್.ಬಿ.ಜಯರಾಮ ರೈ:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಬಿ.ಜಯರಾಮ ರೈ ಮಾತನಾಡಿ, ಸಹಕಾರ ಬೇರೆ ಅಲ್ಲ, ಸಂಘಟನೆ ಬೇರೆ ಅಲ್ಲ.ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ರೈತರಿಗೆ ಬೇಕಾದ ಸಾಲ, ಸವಲತ್ತಗಳನ್ನು ಒದಗಿಸಿ ಅವರನ್ನು ಸದೃಢ ಮಾಡುವಂತಹ ಕಾರ್ಯ ಸಹಕಾರ ಕ್ಷೇತ್ರದ ಮುಖ್ಯ ಉದ್ದೇಶವಾಗಿದೆ.ಹುಟ್ಟಿನಿಂದ ಸಾವಿನವರೆಗೂ ಸಹಕಾರ ಕ್ಷೇತ್ರ ಸ್ಪಂದಿಸುತ್ತದೆ ಎಂದರು.
ರೈತರ ಸಮಸ್ಯೆಗಳಿಗೆ ಸ್ಪಂದನೆ-ರವೀಂದ್ರ ಕಂಬಳಿ:
ಮಂಗಳೂರು ಸ್ಕ್ಯಾಡ್ಸ್‌ನ ಅಧ್ಯಕ್ಷ ರವೀಂದ್ರ ಕಂಬಳಿ ಮಾತನಾಡಿ, ಉಭಯ ಜಿಲ್ಲೆಯ ಸಹಕಾರಿ ಸಂಘಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸಾಲ ಸೌಲಭ್ಯಗಳನ್ನು ಒದಗಿಸಿ, ಸಾಲ ಮರುಪಾವತಿ ಮಾಡುವ ಮೂಲಕ ವಿಶೇಷವಾದ ಯೋಜನೆಯನ್ನು ಸಂಘ ಹಾಕಿಕೊಂಡಿದೆ.ಸಂಘಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಉತ್ತಮ ಸಾಧನೆ ಮಾಡಿ, ವರ್ಷಾಂತ್ಯದಲ್ಲಿ ಕೋಟಿಗಿಂತಲೂ ಹೆಚ್ಚು ಲಾಭದಾಯಕ ಗಳಿಸಿ ರೈತ ಸದಸ್ಯರಿಗೆ ಉತ್ತಮ ಡಿವಿಡೆಂಡ್ ನೀಡುವ ಮೂಲಕ ರೈತರಿಗೆ ಮತ್ತು ಸಹಕಾರ ಸಂಘಕ್ಕೆ ಉತ್ತಮ ಬಾಂಧವ್ಯವನ್ನು ಬೆಳೆಸುವ ಕಾರ್ಯ ಸಂಘ ಮುಂದೆ ಬರುತ್ತಿದೆ ಎಂದರು.
ಇರ್ದೆ-ಬೆಟ್ಟಂಪಾಡಿಯಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಸಹಕಾರ ಸಪ್ತಾಹ-ರಮೇಶ್ ಹೆಚ್.ಎನ್.:
ಸಹಕಾರ ಸಂಘಗಳ ಉಪನಿಬಂಧಕ ರಮೆಶ್ ಹೆಚ್.ಎನ್ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಸಹಕಾರ ಸಪ್ತಾಹವನ್ನು ಆಚರಿಸುತ್ತಿದ್ದೇವೆ.ಪಂಡಿತ್ ಜವಾಹರಲಾಲ್ ನೆಹರೂ ಅವರ ಹುಟ್ಟು ಹಬ್ಬದ ದಿವಸ, ಅವರು ಸಹಕಾರ ಚಳವಳಿಯ ಬೆಳವಣಿಗೆಗೆ ನೀಡಿದ ಪ್ರೋತ್ಸಾಹಕ್ಕಾಗಿ ಸಪ್ತಾಹ ಉದ್ಘಾಟನೆ ನಡೆಸಲಾಗುತ್ತದೆ ಎಂದರು.
ಗ್ರಾಮೀಣ ಜನರ ಜೀವನ ರೀತಿಯನ್ನೇ ಬದಲಾವಣೆಗೊಳಿಸಿದ ಕ್ಷೇತ್ರ-ಬಿಂದು ನಾಯರ್:
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮೂಡಬಿದಿರೆ ಕೆ.ಪಿ.ಸಿ.ಎಂ.ಕಾಲೇಜಿನ ಪ್ರಾಂಶುಪಾಲ ಬಿಂದು ನಾಯರ್ ಅವರು ‘ಸಹಕಾರ ಸಚಿವಾಲಯ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳುವಳಿಯನ್ನು ಬಲಪಡಿಸುವುದು’ ಎಂಬ ವಿಷಯದ ಬಗ್ಗೆ ಮಾತನಾಡಿ, ಉಭಯ ಜಿಲ್ಲೆಗಳ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದ ಜನರ ಜೀವನ ರೀತಿಯನ್ನೇ ಬದಲಾವಣೆ ಮಾಡಿದ ಕ್ಷೇತ್ರವಾಗಿದೆ.ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುವಂಥದ್ದು, ಜನರ ಪ್ರೀತಿಯಿಂದ ಬದುಕಲು ಸಾಧ್ಯವಾಗುವಂಥದ್ದನ್ನು ಕಲ್ಪಿಸಿಕೊಟ್ಟದ್ದು ಸಹಕಾರ ಕ್ಷೇತ್ರ ಎಂದರು.
ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರೂ ಆಗಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ, ಪುತ್ತೂರು ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರವೀಣ್ ಕುಮಾರ್ ರೈ ಮೇನಾಲ, ಸಹಕಾರ ಸಂಘಗಳ ಸಹಾಯಕ ನಿಬಂಧಕ ರಘು,ಜಿಲ್ಲಾ ಸಹಕಾರಿ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಽಕಾರಿ ಎಸ್.ವಿ.ಹಿರೇಮಠ, ವಲಯ ಮೇಲ್ವಿಚಾರಕರಾದ ವಸಂತ ಎಸ್., ಮನೋಜ್ ಕುಮಾರ್, ಶರತ್ ಡಿ, ಪ್ರದೀಪ್, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಗಿರೀಶ್ವರ ಭಟ್ ಯಂ, ಹಾಗೂ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.ಝೀ ಕನ್ನಡ ಸರಿಗಮಪ ಪ್ರತಿಭೆ ಸಮನ್ವಿ ರೈ ಮದಕ ಪ್ರಾರ್ಥಿಸಿದರು.ಚಂದ್ರನ್, ಶರತ್ ಡಿ, ಕರುಣಾಕರ ಶೆಟ್ಟಿ, ಸದಾಶಿವ ರೈ, ನಾಗರಾಜ ಕಜೆ, ಗಿರೀಶ್ವರ ಭಟ್, ದೀಪಿಕಾ ಪಿ.ರೈ, ಪ್ರದೀಪ್ ಕೆ, ವಸಂತ ಎಸ್, ಲಿಂಗಪ್ಪ ಗೌಡ, ರಾಮಯ್ಯ ರೈ, ಸ್ವಾತಿ ಅವರು ಅತಿಥಿಗಳಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಹಲವಾರು ಸಾಧಕರನ್ನು ಸನ್ಮಾನಿಸಲಾಯಿತು.ಹಿರಿಯ ಸಹಕಾರಿ ಧುರೀಣ ಶೇಷಪ್ಪ ರೈ ನಾಕಪ್ಪಾಡಿ, ಅನಿವಾಸಿ ಉದ್ಯಮಿ ಮೊಹಮ್ಮದ್ ಹಾಜಿ ಕುಕ್ಕುವಳ್ಳಿ, ಪ್ರಗತಿಪರ ಕೃಷಿಕ, ಹವ್ಯಾಸಿ ಯಕ್ಷಗಾನ ಕಲಾವಿದರೂ ಆಗಿರುವ ಸುಬ್ಬಣ್ಣ ಗೌಡ ಪಾರ, ಪ್ರಗತಿಪರ ಜೇನುಕೃಷಿಕ ಮನಮೋಹನ್ ಅರಂಬ್ಯ, ನೋಟರಿ ವಕೀಲ ಮಂಜುನಾಥ್ ಎನ್.ಎಸ್, ಝೀ ಕನ್ನಡ ಸರಿಗಮಪ ಪ್ರತಿಭೆ ಸಮನ್ವಿ ರೈ ಮದಕ, ಇರ್ದೆ ಬೆಟ್ಟಂಪಾಡಿ ಸಹಕಾರಿ ಸಂಘದ ಸಂಸ್ಥಾಪಕರಾದ ಸಂಜೀವ ಶೆಟ್ಟಿ ಕೆ, ಮಾಜಿ ಮಂಡಲ ಪ್ರಧಾನ ಪರಮೇಶ್ವರ ಭಟ್,ಜಿಲ್ಲಾ ಸಹಕಾರ ಯೂನಿಯನ್‌ನ ನಿವೃತ್ತ ಮುಖ್ಯ ಕಾರ್ಯಾನಿರ್ವಹಣಾಽಕಾರಿ ಸಾವಿತ್ರಿ ಕೆ.ರೈ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ರಂಗನಾಥ ರೈ ಹಾಗೂ ಕಾರ್ಯಕ್ರಮ ನಿರೂಪಕ, ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್‌ರವರನ್ನು ಸನ್ಮಾನಿಸಲಾಯಿತು.ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ಉದಯ ರೈ ಮಾದೋಡಿಯವರನ್ನು ಸಹಕಾರಿ ಶಾಲು, ಹೂ ನೀಡಿ ಅಭಿನಂದಿಸಲಾಯಿತು.
ಪುತ್ತೂರು, ಕಡಬ ತಾಲೂಕಿನ ಸಹಕಾರ ಸಂಘಗಳ ಅಧ್ಯಕ್ಷ, ಸಿಇಒ ಅವರಿಗೆ ಅಭಿನಂದನೆ:
ಪುತ್ತೂರು ಮತ್ತು ಕಡಬ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷ ಮತ್ತು ಮುಖ್ಯಕಾರ್ಯನಿರ್ವಹಣಾಽಕಾರಿಯವರನ್ನು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸಹಕಾರ ಶಾಲು ಹೊದಿಸಿ ಅಭಿನಂದಿಸಿದರು.ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವ ಮೂರ್ತಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಮುಖ್ಯಕಾರ್ಯನಿರ್ವಹಣಾಽಕಾರಿ ಚಂದ್ರಶೇಖರ್, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟ್ರಮಣ ಕೆ.ಎಸ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಗಿರೀಜಾ ಕೆ, ಕೆದಂಬಾಡಿ-ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕಳ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಿನಯಕುಮಾರ್ ರೈ ದೇರ್ಲ, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ಡಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮಧುಕರ ಎಚ್, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಸಿ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿ, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತಿ ಭಾಸ್ಕರ್, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ಕುಮಾರ್, ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ತೋಯಜಾಕ್ಷ ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಪುಷ್ಪಾ, ಹೊಸ್ಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಚಂದ್ರ ರೈ ಕುಂಟೋಡಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ, ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಾಮೋದರ ಗುಂಡ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಪುನೀತ್ ಕುಮಾರ್ ಕೊಪ್ಪಡ್ಕ, ಬನ್ನೂರು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಧಾ ಬಿ.ರೈ, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಗೌಡ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೋಹರ್‌ಪ್ರಕಾಶ್,ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಜಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೆಶ್ ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾಕರ ಕೆ.ಎಮ್, ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ.ಪ್ರಸಾದ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶೋಭಾ, ಏನೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ, ಸುಬ್ರಹ್ಮಣ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡ್, ಕುಂಬ್ರ ಮೂರ್ತೆದಾರರ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಆರ್.ಸಿ ಅವರಿಗೆ ಸಹಕಾರಿ ಶಾಲು ಹೊದಿಸಿ ಅಭಿನಂದಿಸಲಾಯಿತು.ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ವಂದಿಸಿದರು.ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
ನಮ್ಮೂರಿನ ಜಾತ್ರೆಯಂತೆ ಸಹಕಾರ ಸಪ್ತಾಹ ನಡೆಸಲಾಗುತ್ತಿದೆ -ಶಶಿಕುಮಾರ್ ರೈ ಬಾಲ್ಯೊಟ್ಟು
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪುತ್ತೂರು ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹ ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಉದ್ಘಾಟನೆಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ.ನಮ್ಮೂರಿನ ಜಾತ್ರೆಯನ್ನು ಯಾವ ರೀತಿಯಲ್ಲಿ ಮಾಡುತ್ತೇವೋ ಅದೇ ರೀತಿ ನಮ್ಮ ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಗಳನ್ನು ಶುದ್ಧಗೊಳಿಸಿ, ಆ ಮೂಲಕ ಧ್ವಜಾರೋಹಣ ಮಾಡಿ ಆಚರಿಸಲಾಗುತ್ತದೆ.ಇದೊಂದು ಅಭೂತಪೂರ್ವ ಕಾರ್ಯಕ್ರಮ.ಸಹಕಾರಿಗಳು ಸೇರಿಕೊಂಡು ಮಾಡುವ ಕಾರ್ಯಕ್ರಮ ಇದಾಗಿದೆ.ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ 7 ದಿವಸ ಸಹಕಾರ ಸಪ್ತಾಹವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.ವಿಶೇಷವಾಗಿ 71ನೇ ಜಿಲ್ಲಾ ಮಟ್ಟದ ಸಹಕಾರಿ ಸಪ್ತಾಹವನ್ನು ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಯೋಜನೆ ಮಾಡಿದೆ. ಸಹಕಾರಿ ಸಂಘಗಳಲ್ಲಿ ಸಿಬ್ಬಂದಿ ವರ್ಗ ನಗುಮೊಗದಿಂದ ಗ್ರಾಹಕರಿಗೆ ಸೇವೆ ನೀಡುತ್ತಿದೆ.ಕೃಷಿಕರಿಗೆ ರೂ.50ಲಕ್ಷದವರೆಗೆ ಸಾಲವನ್ನು ಸಹಕಾರಿ ಸಂಘ ನೀಡುತ್ತದೆ ಹೊರತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನೀಡುವುದಿಲ್ಲ.ಸಾಲ ನೀಡುವ ಸಂದರ್ಭದಲ್ಲಿ ಗ್ರಾಹಕರನ್ನು ಯಾವುದೇ ರೀತಿಯಲ್ಲಿ ಸಹಕಾರ ಸಂಘಗಳು ಸತಾಯಿಸುವುದಿಲ್ಲ ಎಂದು ಹೇಳಿದರು.