





ರಝಾನಗರ: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಇಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾಯಿತು.ವಿಟ್ಲ ಕಮ್ಯೂನಿಟಿ ಸೆಂಟರ್ ಇದರ ಸದಸ್ಯರು ಮತ್ತು ಸಂಪನ್ಮೂಲ ವ್ಯಕ್ತಿಯಾದ ಹಝ್ರತ್ ಶೇಖ್ ಮೊಹಮ್ಮದ್ ಇರ್ಫಾನಿ ಕಲ್ಲಡ್ಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಯಾವ ರೀತಿ ಪಡೆಯಬೇಕು, ಸಮಯ ಪಾಲನೆ, ಶಿಕ್ಷಕರಿಗೆ, ಹಿರಿಯರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬ ಉಪಯುಕ್ತ ಮಾಹಿತಿಯೊಂದಿಗೆ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.



ಕ್ರೀಡಾಜ್ಯೋತಿಯನ್ನು ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ಬೆಳಗಿಸಿದರು. ಬಳಿಕ ಪಥಸಂಚಲನ ನಡೆಸಿ, ಕ್ರೀಡಾ ಬಲೂನ್ ಬಾನಿಗೆ ಹಾರಿಸುವುದರ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಮುಖ್ಯ ಶಿಕ್ಷಕಿ ವಿಮಾಲರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ಉಬೈದ್,ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್ ಹಾಗೂ ಎಲ್ಲಾ ಶಿಕ್ಷಕರು ಮತ್ತು ಶಾಲಾ ನಾಯಕ ಮೊಹಮ್ಮದ್ ಆಸೀಂ ಉಪಸ್ಥಿತರಿದ್ದರು. ಶೇಖ್ ಜಲಾಲುದ್ದೀನ್ ಸ್ವಾಗತಿಸಿ , ವಂದಿಸಿದರು. ಎಲ್ಸಿ ಲಸ್ರಾದೋ ಕಾರ್ಯಕ್ರಮ ನಿರೂಪಿಸಿದರು.










