ಪುತೂರು: ನಗರಸಭೆ ವ್ಯಾಪ್ತಿಯಲ್ಲಿ ಕೆಟ್ಟು ಹೋದ ರಸ್ತೆಗಳ ತೇಪೆ ಕಾರ್ಯ ತಕ್ಷಣ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ನಗರಸಭೆ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ ಅವರು ಪೌರಾಯುಕ್ತರ ಉಪಸ್ಥಿತಿಯಲ್ಲಿ ಸೂಚನೆ ನೀಡಿದ್ದಾರೆ.
ಪುತ್ತೂರು ನಗರಸಭೆ ವ್ಯಾಪ್ತಿಯ ದರ್ಬೆ ಜಂಕ್ಷನ್ ನಿಂದ ಬೊಳುವಾರು ಹಾಗು ಎಪಿಎಂಸಿ ಮುಖ್ಯರಸ್ತೆ ಆದರ್ಶ ಆಸ್ಪತ್ರೆಯಿಂದ ರೈಲ್ವೇ ಸೇತುವೆ ತನಕ ಮತ್ತು ವಿವೇಕಾನಂದ ಕಾಲೇಜು ಬಳಿಯಿಂದ ಪಡೀಲು ಜಂಕ್ಷನ್ ತನಕ, ಸಾಲ್ಮರದಿಂದ ಬೆದ್ರಾಳದ ತನಕ ರಸ್ತೆಗಳ ತೇಪೆ ಕಾಮಗಾರಿ ನಡೆಯಲಿದೆ ಎಂದು ಅಧ್ಯಕ್ಷೆ ಲೀಲಾವತಿ ಕೃಷ್ಣನಗರ ಮತ್ತು ಉಪಾಧ್ಯಕ್ಷ ಬಾಲಚಂದ್ರ ಅವರು ತಿಳಿಸಿದ್ದಾರೆ.