ಪುತ್ತೂರು: ಪುತ್ತೂರಿನ ನರಿಮೊಗರಿನಲ್ಲಿರುವ ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ನಡೆದ ವಿದ್ಯಾಭಾರತಿ ವಿಜ್ಞಾನ ಮತ್ತು ಸಂಸ್ಕೃತಿ ಜ್ಞಾನ ಸ್ಪರ್ಧೆಗಳಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿರುವರು.
ಕಿಶೋರ ವರ್ಗದಲ್ಲಿ 9ನೇ ತರಗತಿಯ ಧನ್ಯ ಶ್ರೀ (ಪ್ರಕಾಶ್ ಎಚ್.ಕೆ ಮತ್ತು ಮಾಲಿನಿ ಕೆ.ಎನ್ ದಂಪತಿ ಪುತ್ರಿ) ಪ್ರಥಮ ಸ್ಥಾನ (ಇನ್ನೋವೇಟಿವ್ ಮಾಡೆಲ್), ಆಪ್ತ ಚಂದ್ರಮತಿ ಮುಳಿಯ (ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿ ಮುಳಿಯ ದಂಪತಿ ಪುತ್ರಿ ) ಪ್ರಥಮ ಸ್ಥಾನ (ವಿಜ್ಞಾನ ಪಿ.ಪಿ .ಟಿ), ಶ್ಯಾಮ್ ಎಂ. ಎಸ್ ದ್ವಿತೀಯ ಸ್ಥಾನ (ಗಣಿತ ಪ್ರಯೋಗ), ಹಾಗೂ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನವನ್ನು 10 ನೇ ತರಗತಿಯ ಸಮರ್ಥ್ ಮತ್ತು ಶಶಾಂಕ್, 9ನೇ ತರಗತಿಯ ಮಿಹಿರ್ ತಂಡವು ಪಡೆದುಕೊಂಡಿರುತ್ತದೆ.
ಬಾಲವರ್ಗದಲ್ಲಿ 8ನೇ ತರಗತಿಯ ಚಾರುದತ್ತ ಪಕ್ಕಳ ತೃತೀಯ ಸ್ಥಾನ (ಕ್ಲೇ ಮಾಡೆಲಿಂಗ್), 7ನೇ ತರಗತಿಯ ಮೇಧಾ ಭಟ್ ದ್ವಿತೀಯ ಸ್ಥಾನ (ವಿಜ್ಞಾನ ಪಿ.ಪಿ .ಟಿ),
6ನೇ ತರಗತಿಯ ಸ್ವೀನಲ್ ಡಿಸಿಲ್ವ ದ್ವಿತೀಯ ಸ್ಥಾನ (ವಿಜ್ಞಾನ ಮಾದರಿ) ಹಾಗೂ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನವನ್ನು 8ನೇ ತರಗತಿಯ ಆರುಷಿ ಮತ್ತು ಅಚಿಂತ್ಯ, 7ನೇ ತರಗತಿಯ ಸುಧೀಕ್ಷಾ ಈ ತಂಡವು ಪಡೆದುಕೊಂಡಿರುತ್ತದೆ.
ಶಿಶು ವರ್ಗದಲ್ಲಿ ತೃತೀಯ ಸ್ಥಾನವನ್ನು 5ನೇ ತರಗತಿಯ ಅನುಷ್ ಎ. ರೈ (ಇನ್ನೋವೇಟಿವ್ ಮಾಡೆಲ್) ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿರುತ್ತದೆ.