ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಅಧ್ಯಾಪನಾ ಅಭಿವೃದ್ಧಿ ಕಾರ್ಯಕ್ರಮ -2024

0

ಉಪನ್ಯಾಸಕರು ಪ್ರತಿಕ್ಷಣ ಕಲಿಯುತ್ತಿರಬೇಕು: ಡಾ. ಕೆ. ಎಂ. ಕೃಷ್ಣ ಭಟ್

ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೃಷ್ಣ ಭಟ್ ಕೆ. ಎಂ. ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರು, ಶಿಕ್ಷಕ ಅಥವಾ ಉಪನ್ಯಾಸಕ ವೃತ್ತಿಯನ್ನು ಶ್ರೇಷ್ಟ ಹಾಗೂ ಪವಿತ್ರವಾದ ಹುದ್ದಯೆಂದು ಪರಿಗಣಿಸಲಾಗಿದೆ. ಉಪನ್ಯಾಸಕರಾದವರು ಪ್ರತಿಕ್ಷಣ ಕಲಿಯುತ್ತಿರಬೇಕು. ಈ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಇಂದಿನ ಆಧುನಿಕ ಯುಗದಲ್ಲಿ ಉತ್ತಮ ಉಪನ್ಯಾಸಕ ಎಂದು ಕರೆಸಿಕೊಳ್ಳಲು ವಿಷಯ ಜ್ಞಾನ ಮತ್ತು ಬುದ್ಧಿವಂತಿಕೆಯ ಜೊತೆಗೆ ನಿರ್ದಿಷ್ಟ ಕೌಶಲ್ಯಗಳನ್ನು ಹೊಂದಿರಬೇಕು. ಅದನ್ನು ಇಂತಹ ಅಧ್ಯಾಪನಾ ಅಭಿವೃದ್ಧಿ ಕಾರ್ಯಕ್ರಮಗಳು ತಿಳಿಸಿಕೊಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುರೇಂದ್ರ ಕಿಣಿ ಜಿ. ಮಾತನಾಡಿ, ಇಂದಿನ ಡಿಜಿಟಲ್ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆ ಅತ್ಯಂತ ಸವಾಲನ್ನು ಒಳಗೊಂಡಿರುವ ಕ್ಷೇತ್ರವಾಗಿದೆ. ಇಂದಿನ ವಿದ್ಯಾರ್ಥಿಗಳ ಪರಿಪೂರ್ಣ ಅಭಿವೃದ್ಧಿಗೆ ಮತ್ತು ಶೈಕ್ಷಣಿಕ ಸಾಧನೆಗೆ ಉಪನ್ಯಾಸಕರ ನಿರ್ದಿಷ್ಟವಾದ ಮಾರ್ಗದರ್ಶನ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಉಪನ್ಯಾಸಕರು ಸಹಾ ನಿರಂತರವಾದ ಓದುವಿಕೆ ಹಾಗೂ ಕಲಿಕೆಯಲ್ಲಿ ತೊಡಗಿಕೊಂಡಾಗ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಪ್ರೆರೇಪಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲಾ ಉಪನ್ಯಾಸಕರು ಭಾಗವಹಿಸಿ ಇದರ ಪ್ರಯೋಜನ ಪಡೆಯಿರಿ ಎಂದರು. ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ವಿಜಯನಾರಾಯಣ ಕೆ. ಎಂ., ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಅಕ್ಷತಾ ಎ.ಪಿ. ಸ್ವಾಗತಿಸಿ, ಉಪನ್ಯಾಸಕ ಸುಶೃತ್ ಸುಧೀರ್ ಉರ್ವಾ ವಂದಿಸಿದರು. ಉಪನ್ಯಾಸಕಿ ಶ್ವೇತಾ ವಿಶ್ವೇಶ್ವರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ಐದು ವಿಶೇಷ ವಿಷಯಗಳಲ್ಲಿ ವಿಚಾರಗೋಷ್ಠಿಗಳು ನಡೆದಿದ್ದು, ಈ ವಿಚಾರಗೋಷ್ಠಿಗಳನ್ನು ತರಬೇತುದಾರರು ಹಾಗೂ ವಿಷಯ ತಜ್ಞರು ನೀಡಿದರು. ಪುತ್ತೂರಿನ ಪ್ರಸಿದ್ಧ ಜೆಸಿಐ ತರಬೇತಿದಾರ ಕೃಷ್ಣಮೋಹನ್, ಬೆಂಗಳೂರಿನ ಕೆ.ಎಲ್.ಇ. ವಿಶ್ವವಿದ್ಯಾನಿಲಯದ ಡಾ. ಕೆ.ಆರ್. ಐತಾಳ್, ಗೋವಾ ವಿಶ್ವವಿದ್ಯಾನಿಲಯದ ಡಾ. ಮಾಂದವ ರಾಮ ಕೃಷ್ಣ ಪ್ರಸಾದ್, ವಿ. ಎಂ. ಸಾಲ್ಗಂಕರ್ ಕಾನೂನು ಕಾಲೇಜಿನ ಡಾ. ಬಿ.ಎಸ್. ಪಾಟೀಲ್, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ವಿಶ್ವನಾಥ್ ವಿಚಾರ ಮಂಡಿಸಿದರು. ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here