




ನೆಲ್ಯಾಡಿ: ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಕಿರಿಯ ವಿಭಾಗದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ 4ನೇ ತರಗತಿ ವಿದ್ಯಾರ್ಥಿನಿ ಕ್ಷಿತಿ ಹಿಮಾನಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಈಕೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಗುರುಗಳಾದ ವಿದ್ವಾನ್ ಕೃಷ್ಣ ಆಚಾರ್ ಬಿ.ಸಿ ರೋಡ್ ಮತ್ತು ವಿದುಷಿ ರಜತಾ ಕೃಷ್ಣಾಚಾರ್ಯ ಹಾಗೂ ಭರತನಾಟ್ಯವನ್ನು ವಿದ್ವಾನ್ ಬಿ.ದೀಪಕ್ ಕುಮಾರ್ ಪುತ್ತೂರು, ಚಿತ್ರಕಲೆಯನ್ನು ಪ್ರಸನ್ನ ಐವರ್ನಾಡು ಇವರ ಬಳಿ ಅಭ್ಯಾಸ ಮಾಡುತ್ತಿದ್ದಾಳೆ. ಪ್ರಸ್ತುತ ಮೆಲ್ಕಾರ್‌ನಲ್ಲಿ ವಾಸ್ತವ್ಯ ಇರುವ ಸಿವಿಲ್ ಇಂಜಿನಿಯರ್ ಮಧುಸೂದನ್ ಅಂಬೆಕಲ್ಲು ಹಾಗೂ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಇವರ ಪುತ್ರಿ.








