ಕುಮಾರಮಂಗಲ‌ ಶಾಲೆಯಲ್ಲಿ ಕಲೋತ್ಸವ, ಕ್ರೀಡಾಕೂಟದ ಅಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಮಾರಮಂಗಲ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಕುಮಾರ ಮಂಗಲ ಇದರ ಜಂಟಿ ಆಶ್ರಯದಲ್ಲಿ ದ.28 ರಂದು ನಡೆಯುವ ವಾರ್ಷಿಕ ಕಲೋತ್ಸವ ಸಂಭ್ರಮ 2024 ಮತ್ತು ದ. 14 ರಂದು ನಡೆಯುವ ವಾರ್ಷಿಕ ಕ್ರೀಡಾ ಕೂಟದ ಆಮಂತ್ರಣ ಪತ್ರ ವನ್ನು ದ.6 ರಂದು ಕುಮಾರಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಡುಗಡೆ ಮಾಡಲಾಯಿತು.

ಎಸ್ ಡಿ ಎಂ ಸಿ ಅಧ್ಯಕ್ಷ ಸುಂದರ ಕೆ, ಹಿರಿಯ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷ ಬಾಲಪ್ಪ ಪೂಜಾರಿ ಬಂಬಿಲ ದೋಳ,ಅಧ್ಯಕ್ಷ ಮಹೇಶ್ ಕೆ ಸವಣೂರು, ಜತೆ ಕಾರ್ಯದರ್ಶಿ ಉಮೇಶ್ ಕುಮಾರಮಂಗಲ, ಕೋಶಾಧಿಕಾರಿ ಪುಟ್ಟಣ್ಣ ಬಂಬಿಲ,ಸವಣೂರು ಗ್ರಾ ಪಂ ಸದಸ್ಯರಾದ ಶೀನಪ್ಪ‌ಶೆಟ್ಟಿ ನೆಕ್ರಾಜೆ, ಯಶೋಧ ನೂಜಾಜೆ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಹೇಮಲತಾ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರಾದ ವಿಶ್ವನಾಥ ಕುಮಾರಮಂಗಲ, ರಾಜೇಶ್ವರಿ ಕನ್ಯಾಮಂಗಲ, ರಮೇಶ್ ಕುಮಾರಮಂಗಲ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ಸಂತೋಷ್ ಸ್ವಾಗತಿಸಿ, ಗೌರವ ಶಿಕ್ಷಕ ಶ್ಯಾಮ್ ವಂದಿಸಿದರು.

LEAVE A REPLY

Please enter your comment!
Please enter your name here