ಪುತ್ತೂರು: ದಿನನಿತ್ಯ ನಮ್ಮ ದೇಹವನ್ನು ಹೊತ್ತು ತಿರುಗುವ ನಮ್ಮ ಕಾಲುಗಳು ಖುಷಿಯಾಗಿದ್ದರೆ ನಮ್ಮ ದೇಹ ಆರಾಮವಾಗಿರುತ್ತದೆ ಎಂಬ ಮಾತಿನಂತೆ ಅವರವರ ಕಾಲಿಗೆ ಒಪ್ಪುವ ಚಪ್ಪಲಿಗಳನ್ನೇ ಧರಿಸಿ ತಿರುಗಡಿದಾಗ ನಮಗೆ ಆರಾಮದಾಯಕ ಅನುಭವವಾಗುತ್ತದೆ ಇದನ್ನೇ ‘ಈಜ್ಹಿ ವಾಕ್’ ಎಂದು ಕರೆಯಬಹುದು.
ಇದೀಗ, ಎಲ್ಲಾ ವಯೋಮಾನದವರಿಗೂ ಒಪ್ಪುವ, ವಿವಿಧ ವಿನ್ಯಾಸದ ದೀರ್ಘ ಬಾಳಿಕೆಯ ಪಾದರಕ್ಷೆಗಳ ಬೃಹತ್ ಸಂಗ್ರಹವನ್ನು ಹೊಂದಿರುವ ‘ಶಿವಂ ಬಿಸಿನೆಸ್ ವೆಂಚರ್’ರವರ ‘ಈಜ್ಹಿ ವಾಕ್ ಚಪ್ಪಲ್ ಮಳಿಗೆ ಡಿ.11ರಂದು ಬೊಳುವಾರು ಶ್ರೀ ದುರ್ಗಾ ಕೃಪಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ಈ ಶುಭಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾೖಕ್, ವರ್ತಕ ಸಂಘದ ಅಧ್ಯಕ್ಷ ವಾಮನ ಪೈ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷರು ಹಾಗೂ ಪ್ರಗತಿ ಹಾಸ್ಪಿಟಲ್ ನ ವೈದ್ಯರಾಗಿರುವ ಡಾ.ಶ್ರೀಪತಿ ರಾವ್, ಮಹಾವೀರ್ ಹಾಸ್ಪಿಟಲ್ ನ ವೈದ್ಯ ಡಾ. ಸುರೇಶ್ ಪುತ್ತೂರಾಯ, ಬೊಳುವಾರು ಶ್ರೀ ದುರ್ಗಾ ಕೃಪಾ ಕಾಂಪ್ಲೆಕ್ಸ್ ಮಾಲಕಿ ಸುಜಾತ ರೈ, ಉದ್ಯಮಿ ಶಿವರಾಮ ಆಳ್ವ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಶಿವಂ ಬಿಸಿನೆಸ್ ವೆಂಚರ್ ಪ್ರಕಟಣೆ ತಿಳಿಸಿದೆ.