ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಕಾಂಕ್ರೀಟ್ ಉತ್ಪನ್ನಗಳ ಉತ್ಪಾದನಾ ಸಂಸ್ಥೆ ಮುಕ್ರಂಪಾಡಿಯ ಆಕರ್ಷಣ್ ಇಂಡಸ್ಟ್ರೀಸ್ ಇದರ ಇಪ್ಪತ್ತೊಂಬತ್ತನೇ ವರುಷದ ಪಾದಾರ್ಪಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ನಲುವತ್ತೊಂದು ದಿವಸಗಳ ಕಾಲ ಹಮ್ಮಿಕೊಂಡಿದ್ದ ಮೆಗಾ ಆಫರ್ ಸೇಲ್, ಆಕರ್ಷಕ ಹೀರೋ ಬೈಕ್ ಬಂಪರ್ ಡ್ರಾ ಹಾಗೂ ಸನ್ಮಾನ ಕಾರ್ಯಕ್ರಮ
ಆಕರ್ಷಣ್ ಕಚೇರಿಯಲ್ಲಿ ನಡೆಯಿತು.
ಪುತ್ತೂರಿನ ಪ್ರಗತಿಪರ ಪ್ರಶಸ್ತಿ ವಿಜೇತ ಕೃಷಿಕರಾದ ಸುರೇಶ್ ಭಟ್ ಬಲ್ನಾಡ್ ಹಾಗೂ ಅಜಿತ್ ಪ್ರಸಾದ್ ರೈ ಆಕರ್ಷಣ್ ನ ಹೊಚ್ಚ ಹೊಸ ಉತ್ಪಾದನೆಯಾದ ಕಾಂಕ್ರೀಟ್ ಪೆಪ್ಪರ್ ಪೋಲ್ ಗಳಿಗೆ ಕರಿಮೆಣಸಿನ ಬಳ್ಳಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ವಾಮನ್ ಪೈ ಮಾತನಾಡಿ ವ್ಯವಹಾರದ ಯಶಸ್ಸು ಗ್ರಾಹಕರ ಕೈಯಲ್ಲಿದೆ
ತನ್ನ ಲಾಭದ ಗಳಿಕೆಯ ಒಂದಂಶವನ್ನು ಪ್ರತೀ ವರ್ಷವೂ ಗ್ರಾಹಕರಿಗೆ ಸಮರ್ಪಣೆ ಮಾಡುತ್ತಿರುವ ಆಕರ್ಷಣ್ ಸಂಸ್ಥೆ ಇಂದು ಮಾದರಿಯಾಗಿ ಎತ್ತರಕ್ಕೆ ಬೆಳೆದು ನಿಂತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಆಕರ್ಷಣ್ ನ ಹೊಸ ಉತ್ಪನ್ನವಾದ ಬ್ರೀಝ್ ಬ್ಲಾಕನ್ನು ಅವರು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿ ಪುತ್ತೂರು ಎಸ್ ಆರ್ ಕೆ ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಮಾತನಾಡಿ ಆಕರ್ಷಣ್ ಸಂಸ್ಥೆ ಇಂದು ಜನ ಮಾನಸದಲ್ಲಿ ಆಕರ್ಷಣೀಯವಾಗಿ ಬೆಳೆದು ಬರುತ್ತಿದೆ.
ಸಂಸ್ಥೆಯ ಉತ್ಪನ್ನಗಳ ಗುಣಮಟ್ಟ,ತಂತ್ರಜ್ಞಾನ ಹಾಗೂ ಸೇವೆ ಪ್ರಶಂಸನೀಯ. ವ್ಯವಹಾರದಲ್ಲಿನ ಪಾರದರ್ಶಕತೆ ಸಂಸ್ಥೆಯನ್ನು ಇಷ್ಟು ಎತ್ತರಕ್ಕೆ ಬೆಳೆದು ನಿಲ್ಲಿಸಿದೆ.ಸಂಸ್ಥೆಯ ಮಾಲಕರಾದ ಕೆಪಿ ಸಾದಿಕ್ ರವರನ್ನು ಹಾಗೂ ಅವರ ತಂಡವಾದ ಟೀಮ್ ಆಕರ್ಷಣ್ ಅನ್ನು ಅತೀ ಹತ್ತಿರದಿಂದ ಬಲ್ಲವನಾದ ನಾನು ಸಂಸ್ಥೆಯ ಉತ್ಪನ್ನಗಳ, ವ್ಯವಹಾರ ವಹಿವಾಟುಗಳ ಬಗ್ಗೆ ಬಹಳಷ್ಟು ಅಭಿಮಾನ ಹೊಂದಿದ್ದೇನೆ ಎಂದರು. ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಆಕರ್ಷಕ ಹೀರೋ ಬೈಕ್ ಲಕ್ಕೀ ಡ್ರಾ ವನ್ನು ನೆರವೇರಿಸಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕ ಸುರೇಶ್ ಭಟ್ ಬಲ್ನಾಡ್ ಮಾತನಾಡಿ ಕೃಷಿಕರಿಗೆ ಬಹಳಷ್ಟು ಗೌರವ ನೀಡುತ್ತಾ ಕೃಷಿಕರಿಗೆ ಅತೀ ಅಗತ್ಯವಿರುವ ಉತ್ಪನ್ನಗಳನ್ನು ತಯಾರು ಮಾಡುತ್ತಿರುವ ಆಕರ್ಷಣ್ ಸಂಸ್ಥೆ ನಾಡಿನ ಕೃಷಿಕರಿಗೆ ಬಹಳಷ್ಟು ಹತ್ತಿರವಾಗುತ್ತಿದೆ. ಗುಣಮಟ್ಟದ ಉತ್ಪನ್ನಗಳಿಗೆ ಆಕರ್ಷಣ್ ಹೆಸರುವಾಸಿಯಾಗಿದೆ. ಸಂಸ್ಥೆಯ ಮಾಲಕರ ಒಡನಾಟ
ಹಾಗೂ ವ್ಯವಹಾರ ಪರಿಶುದ್ಧತೆಯಿಂದ ಕೂಡಿದೆ ಎಂದರು.
ಪುತ್ತೂರಿನ ಪ್ರಗತಿಪರ ಕೃಷಿಕ ಅಜಿತ್ ಪ್ರಸಾದ್ ರೈ ಮಾತನಾಡಿ ಸಿದ್ಧಿ, ಸಾಧನೆ ಮತ್ತು ಆಕರ್ಷಣೆ ಇವೆಲ್ಲವೂ ಕೂಡಾ ಸಂಸ್ಥೆಯ ಮತ್ತು ಸಂಸ್ಥೆಯ ಮಾಲಕರ ಹೆಸರಿನಲ್ಲಿ ಅಡಗಿದೆ.
ನಾಡಿನ ಕೃಷಿಕರ ಅಗತ್ಯತೆಗಳನ್ನು ಪೂರೈಸುತ್ತಾ ಕೃಷಿಕರ ಬೆನ್ನೆಲುಬಾಗಿ ಬೆಳೆಯುತ್ತಿರುವ ಆಕರ್ಷಣ್ ಸಂಸ್ಥೆ ನಾಡಿನ ಹೆಮ್ಮೆಯ ಹಾಗೂ ಗೌರವದ ಉತ್ಪಾದನಾ ಕೇಂದ್ರವಾಗಿದೆ. ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಕರ್ಷಣ್ ಸಂಸ್ಥೆಯ ಮಾಲಕ ಕೆ ಪಿ ಮುಹಮ್ಮದ್ ಸಾದಿಕ್ ಹಾಜಿಯವರು ʼಸಂಸ್ಥೆಯ ಇಪ್ಪತ್ತೊಂಬತ್ತು ವರ್ಷಗಳ ಯಶಸ್ವೀ ಪಯಣದಲ್ಲಿ ಗ್ರಾಹಕರ ಮತ್ತು ಹಿತೈಷಿಗಳ ಪಾತ್ರ ಬಹಳಷ್ಟು ಮುಖ್ಯವಾಗಿ ಗಮನಿಸಿದ್ದೇವೆ ಮತ್ತು ಪರಿಗಣಿಸಿದ್ದೇವೆ. ನನ್ನ ಆತ್ಮೀಯ ವಲಯದ ಹಲವು ಮಂದಿ ಮೇರು ವ್ಯಕ್ತಿತ್ವಗಳ
ಶಿಸ್ತುಬದ್ದ ವ್ಯವಹಾರ ಸಾಧನೆ ಮತ್ತು ಪ್ರೇರಣೆಯೇ ನಮ್ಮ ಸಂಸ್ಥೆಯ ಯಶಸ್ಸಿಗೆ ಪ್ರಮುಖ ಕಾರಣ ಸದಾ ಸಮಯ ಅವರಿಗೆ ನಾವು ಅಭಾರಿಯಾಗಿದ್ದೇವೆ ಎಂದರು.
ಗೌರವಾರ್ಪಣೆ
ಆಕರ್ಷಣ್ ಸಂಸ್ಥೆಯ ವತಿಯಿಂದ ಕುಂಬ್ರದ ವರ್ತಕರ ಸಂಘದ ಇಪ್ಪತ್ತನೇ ವರ್ಷದ ಸವಿ ನಪಿಗಾಗಿ ನಿರ್ಮಿಸಿದ ಪೊರ್ಲುದ ಕುಂಬ್ರ ಸೆಲ್ಫೀ ಪಾಯಿಂಟ್ ನಲ್ಲಿ ನಿರ್ಮಾಣಗೊಂಡ
ಹಳೇಕಾಲದ ಎತ್ತಿನ ಗಾಡಿಯ ಕೆತ್ತನೆಯ ಶಿಲ್ಪಿ ಕುಂಬ್ರದ ನಾರಾಯಣ ಆಚಾರ್ಯ ರವರನ್ನು ಸನ್ಮಾನಿಸಲಾಯಿತು.ಕುಂಬ್ರದ ಸಣ್ಣ ರೈತ ಕೃಷಿಕರ ಸಮಾಲೋಚಕ ಅಲಂಗೂರು ಇಬ್ರಾಹಿಂ, ಪುತ್ತೂರು ಆರ್ವಿ ಗ್ರಾಫಿಕ್ಸ್ ನ ಮಾಲಕರಾದ ಜ್ಞಾನೇಶ್ ಹಾಗೂ ಆಕರ್ಷಣ್ ಸಂಸ್ಥೆಯ ಟೀಮ್ ಕನ್ಸಲ್ಟೆಂಟ್ ಬಿನಿಲ್ ಮ್ಯಾಥ್ಯೂ ಇವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ದುಡಿಯುತ್ತಿರುವ ನೌಕರ ವೃಂದದವರಿಗೆ ಗೌರವಾರ್ಪಣೆ ನಡೆಯಿತು.
ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ನೇಮಾಕ್ಷ ಸುವರ್ಣ ,ಟ್ರೇಡ್ ಮಾಸ್ಟರ್ ಪಾಲುದಾರ ಆರಿಫ್ ಪುತ್ತೂರು ಉಪಸ್ಥಿತರಿದ್ದರು.ಸಂಸ್ಥೆಯ ಮ್ಯಾನೇಜರ್ ಎಸ್ ಪಿ ಬಶೀರ್ ಶೇಖಮಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸೇಲ್ಸ್ ಮ್ಯಾನೇಜರ್ ಬಶೀರ್ ಸಂಪ್ಯ ವಂದಿಸಿದರು.
ಸಿಬ್ಬಂದಿಗಳಾದ ಮಹಮ್ಮದ್ ಪುಣಚ, ಇಫ್ರತ್ ಅಲ್ ಶೈನಿ, ಸೈದಾ ಮಡಿಕೇರಿ,ರಶೀದ, ರಿನ್ನಾ ಡಿ ಸೋಜಾ, ಹಸೀನಾ, ಅಬ್ದುಲ್ ಜಲೀಲ್, ನಾಗರಾಜ್, ಮಿಸ್ಬಾಹ್,ರತ್ನಾಕರ ಕಂಬಳಬೆಟ್ಟು, ಮೋಹನ ನಗರ, ನಾಗೇಶ್ ಪರ್ಪುಂಜ, ಆಸಿಫ್ ಕಂಪ, ಅನೀಸ್ ಕಂಪ, ಆದಂ,ಜಯಂತಿ, ಇಮ್ತಿಯಾಝ್, ಉಮೇಶ್, ಝಾಕಿರ್ವಿ ವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ವ್ಯವಹಾರದಲ್ಲಿ ಗಳಿಸಿದ ಸಂಪತ್ತಿಗಿಂತಲೂ ಜನರ ಮನಸ್ಸಿನಲ್ಲಿ ಗಳಿಸಿರುವ ಪ್ರೀತಿ ವಿಶ್ವಾಸ ಗೌರವ ಎಂಬುದು ಬೆಳೆಕಟ್ಟಲಾರದ ಬಲುದೊಡ್ಡ ಸಂಪತ್ತು ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮೇರು ವ್ಯಕ್ತಿಗಳ ಸಾಧನೆ ಮತ್ತು ಪ್ರೇರಣೆಯೇ ನಮ್ಮ ಯಶಸ್ಸಿಗೆ ಕಾರಣ ಸಂಸ್ಥೆಯ ಇಪ್ಪತ್ತೊಂಬತ್ತು ವರ್ಷಗಳ ಯಶಸ್ವೀ ಪಯಣದಲ್ಲಿ ನಮ್ಮ ಬೆನ್ನುತಟ್ಟಿ ಪ್ರೋತ್ಸಾಹಿಸಿದ
ಸರ್ವರಿಗೂ ನಾವು ಅಭಾರಿಯಾಗಿದ್ದೇವೆ.
ಕೆ ಪಿ ಸಾದಿಕ್ ಹಾಜಿ
ಮಾಲಕರು
ಸಂಸ್ಥೆಯ ಇಪ್ಪತ್ತೊಂಬತ್ತನೇ ವರ್ಷದ ವರುಷದ ಹರುಷ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ಆಫರ್ ಸೇಲ್ ನಲ್ಲಿ ನೂರಾರು ಗ್ರಾಹಕರಿಗೆ ಕ್ಯಾಶ್ ಡಿಸ್ಕೌಂಟ್ ಮತ್ತು ಉಡುಗೊರೆಗಳನ್ನು ಖಚಿತವಾಗಿ ನೀಡಲಾಗಿತ್ತು ಅದೃಷ್ಟವಂತ ಗ್ರಾಹಕರಿಗೆ ಬಂಪರ್ ಡ್ರಾ ಆಗಿ ಬೈಕ್ ಒಂದನ್ನು ಇರಿಸಲಾಗಿತ್ತು ಸಕಲೇಶಪುರದ ಘನಶ್ಯಾಮ್ ಎಂಬವರು ಲಕ್ಕೀ ಡ್ರಾದಲ್ಲಿ ವಿಜೇತರಾಗಿ ಬೈಕ್ ಪಡೆದುಕೊಂಡರು