ಉಪ್ಪಿನಂಗಡಿ: ಮನುಷ್ಯನ ಹುಟ್ಟು ಆಕಸ್ಮಿಕವಾಗಿದ್ದರೂ, ಮರಣವೆಂಬುದು ನಿಶ್ಚಿತವಾಗಿರುತ್ತದೆ. ಅದರ ಮಧ್ಯದ ಬದುಕಿನ ಸಾಧನೆಗಳು ಮಾತ್ರ ಈ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಮಾಣಿ ಗ್ರಾ.ಪಂ. ಸದಸ್ಯ ಬಾಲಕೃಷ್ಣ ಆಳ್ವ ತಿಳಿಸಿದರು.
ಇತ್ತೀಚೆಗೆ ನಿಧನರಾದ ಬಂಟ್ವಾಳ ತಾ.ಪಂ. ಮಾಜಿ ಉಪಾಧ್ಯಕ್ಷೆ ಶಾಂಭವಿ ಡಿ. ಶೆಟ್ಟಿ ಕದಿಕ್ಕಾರು ಅವರಿಗೆ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ನೇತ್ರಾವತಿ ಸಭಾಂಗಣದಲ್ಲಿ ಡಿ.10ರಂದು ನಡೆದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಅವರು, ಶಾಂಭವಿ ಡಿ. ಶೆಟ್ಟಿಯವರು ಓರ್ವ ಉತ್ತಮ ಗೃಹಣಿಯಾಗಿ ಮನೆಯನ್ನು ಬೆಳಗಿಸಿದ್ದಲ್ಲದೆ, ಓರ್ವ ರಾಜಕಾರಣಿಯಾಗಿ, ಜನಪ್ರತಿನಿಧಿಯಾಗಿ ಸಮಾಜದ ಕಷ್ಟ- ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿದ್ದವರು. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮುರಳೀಧರ ರೈ ಮಠಂತಬೆಟ್ಟು, ಡಾ. ರಾಜಾರಾಮ್ ಕೆ.ಬಿ., ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯರಾದ ಎಂ.ಎಸ್. ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ತಾ.ಪಂ. ಮಾಜಿ ಸದಸ್ಯೆ ಮಲ್ಲಿಕಾ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಮಾಜಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಪೆರ್ನೆ ಸಿಎ ಬ್ಯಾಂಕ್ ಅಧ್ಯಕ್ಷರಾದ ತೋಯಜಾಕ್ಷ ಶೆಟ್ಟಿ, ನೇರಳಕಟ್ಟೆ ಸೇವಾ ಸಹಕಾರಿ ಬ್ಯಾಂಕ್ನ ನಿರ್ದೇಶಕ ನಿರಂಜನ್ ರೈ ಕುರ್ಲೆತ್ತಿಮಾರು, ಬಂಟ್ವಾಳ ನಗರ ಸಭಾ ಸದಸ್ಯ ಲೋಲಾಕ್ಷ ಶೆಟ್ಟಿ ಮೊಡಂಕಾಪು ಗುತ್ತು, ಒಳಮೊಗ್ರು ಗ್ರಾ.ಪಂ. ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಉಪ್ಪಿನಂಗಡಿ ಪಟ್ಲ ಫೌಂಡೇಶನ್ ಅಧ್ಯಕ್ಷ ಜಗದೀಶ ಶೆಟ್ಟಿ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು, ಮಾಜಿ ಉಪಾಧ್ಯಕ್ಷೆ ಶಾಂಭವಿ ರೈ ಪುಳಿತ್ತಡಿ, ಕೋಡಿಂಬಾಡಿ ಗ್ರಾ.ಪಂ. ಸದಸ್ಯ ಜಗದೀಶ ಶೆಟ್ಟಿ ನಡುಮನೆ, ಪೆರ್ನೆ ಗ್ರಾ.ಪಂ. ಸದಸ್ಯೆ ನಳಿನಿ ರೋಹಿತಾಕ್ಷ, ಮಾಜಿ ಲ್ಯಾಂಪ್ ಸೊಸೈಟಿ ಉಪಾಧ್ಯಕ್ಷ ಧರ್ನಪ್ಪ ನಾಯ್ಕ, ಪ್ರಮುಖರಾದ ಡಾ. ಯತೀಶ್ ಕುಮಾರ್, ಯತೀಶ್ ಶೆಟ್ಟಿ ಸುವ್ಯ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ವಿಕ್ರಂ ಶೆಟ್ಟಿ ಅಂತರ, ಪುಷ್ಪರಾಜ ಶೆಟ್ಟಿ ಅಡೆಕ್ಕಲ್, ವೆಂಕಪ್ಪ ಪೂಜಾರಿ ಮರುವೇಲು, ಪದ್ಮನಾಭ ಸಾಮಾನಿ, ಕುಟುಂಬಸ್ಥರಾದ ಕಳೆಂಜ ಗೋಪಾಲ ಶೆಟ್ಟಿ, ಚೆನ್ನಪ್ಪ ಶೆಟ್ಟಿ, ಚಂದ್ರ ಶೆಟ್ಟಿ ಬೊಳ್ಳಾವು, ದೊಡ್ಡಣ್ಣ ಶೆಟ್ಟಿ ಕದಿಕ್ಕಾರು, ಯಶೋಧ ಕುರ್ಲೆತ್ತಿಮಾರ್, ಯಮುನಾ ಪಟ್ರಮೆ, ಭುಜಂಗ ಶೆಟ್ಟಿ ಪಟ್ರಮೆ, ದಿನೇಶ ಶೆಟ್ಟಿ ಭಂಡಾರಿಬೆಟ್ಟು, ಗಂಗಾಧರ ಶೆಟ್ಟಿ ದೋಟಗುತ್ತು, ರೋಶನ್ ಶೆಟ್ಟಿ ದೋಟಗುತ್ತು, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಶಿವಪ್ರಸಾದ್ ಬೊಳ್ಳಾವು, ಮೃತರ ಪತಿ ದೇವದಾಸ್ ಶೆಟ್ಟಿ ಮೊಡಂಕಾಪು ಮತ್ತಿತರರು ಉಪಸ್ಥಿತರಿದ್ದರು.