ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಿಂಗಿಲದಿಂದ ಇರ್ದೆ ಜಂಕ್ಷನ್ ವರೆಗೆ ಮುಖ್ಯ ರಸ್ತೆಯ ಬದಿಯ ತ್ಯಾಜ್ಯ, ಕಸಕಡ್ಡಿಗಳನ್ನು ಸ್ವಚ್ಚ ಗೊಳಿಸುವ ಮೂಲಕ ಒಂದು ದಿನದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯತ್ ಬೆಟ್ಟಂಪಾಡಿ, ಗ್ರಾಮಾಂತರ ಪೊಲೀಸ್ ಠಾಣೆ ಸಂಪ್ಯ ಹಾಗೂ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವತಿಯಿಂದ ಈ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಸರಳೀಕಾನ, ಉಪಾಧ್ಯಕ್ಷ ಮಹೇಶ್. ಕೆ, ಪಿಡಿಒ ಸೌಮ್ಯ, ಕಾರ್ಯದರ್ಶಿ ಬಾಬು ನಾಯ್ಕ,ಪಂಚಾಯತ್ ಸದಸ್ಯರು, ಬೀಟ್ ಪೊಲೀಸರು, ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು, ಸ್ವಚ್ಚತಾ ಸಿಬ್ಬಂದಿಗಳು ಪಾಲ್ಗೊಂಡರು.