ಪುತ್ತೂರು: ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಘಟಕದಿಂದ ರ್ಯಾಮ್ಕೋ ಸಿಮೆಂಟ್ ಇಂಜಿನಿಯರ್ಸ್ ಪ್ರೀಮಿಯರ್ ಲೀಗ್ ಸೀಸನ್ -2 ಕ್ರಿಕೆಟ್ ಪಂದ್ಯಾಟವು ಡಿ.15ರಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಪಂದ್ಯಾಟದ ಸಂಘಟನಾಧ್ಯಕ್ಷ, ಇಂಜಿನಿಯರ್ ನರಸಿಂಹ ಪೈ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪಂದ್ಯಾಟದಲ್ಲಿ ಭಾಗವಹಿಸುವವರು ಎಸೋಸಿಯೇಶನ್ನ ಸದಸ್ಯರಾಗಿದ್ದು, 8 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿವೆ. ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಚೇಯರ್ಮ್ಯಾನ್ 11, ಪುತ್ತೂರು ಸೆಕ್ರೆಟರಿ 11, ಬೆಳ್ತಂಗಡಿ ಸಂಘಟನೆ, ಮಂಗಳೂರು, ಕಾರ್ಕಳ, ಮುಲ್ಕಿ, ಸುಳ್ಯ, ಉಡುಪಿ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದೆ.
ಬೆಳಿಗ್ಗೆ ಪಂದ್ಯಾಟದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಜಿಲ್ಲಾ ಕ್ರೀಡಾಧಿಕಾರಿ ಪ್ರದೀಪ್ ಡಿಸೋಜ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ಮಹಿಳಾ ಕ್ರಿಕೆಟ್ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ಸಂತ ಪಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯರಾದ ಅನಘ ಮತ್ತು ಎಂಜಲಿಕ ಪಿಂಟೊ ಅವರನ್ನು ಸನ್ಮಾನಿಸಲಾಗುವುದು. ಸಂಜೆ ನಡೆಯು ಸಮಾರೋಪ ಸಮಾರಂಭದಲ್ಲಿ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇದರ ರಾಜ್ಯ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ರೈ, ರ್ಯಾಮ್ಕೋ ಸಿಮೆಂಟ್ ಕಂಪೆನಿಯ ತಾಂತ್ರಿಕ ವಿಭಾಗದ ಇಂಜಿನಿಯರ್ ಸೂರಜ್ ಕುಮಾರ್, ಮುಗೋರೋಡಿ ಕನ್ಸ್ಟ್ರಕ್ಷನ್ನ ಮಾಲಕ ಸುಧಾಕರ್ ಶೆಟ್ಟಿ, ಲಕ್ಷ್ಮೀ ಇಂಡಸ್ಟ್ರೀಸ್ನ ಸ್ಥಾಪಕ ಮೋಹನ್ ಕುಮಾರ್, ಉಪ್ಪಿನಂಗಡಿ ಆದಿತ್ಯ ಎಂಟರ್ಪ್ರೈಸಸ್ನ ಮಾಲಕ ತ್ರಿವಿಕ್ರಮ್ ಇ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದ ಅವರು ಪಂದ್ಯಾಟದಲ್ಲಿ ವಿಜೇತರಿಗೆ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಘಟಕದ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ, ಉಪಾಧ್ಯಕ್ಷ ನಿರ್ದೇಶಕ ವೆಂಕಟ್ರಾಜ್ ಪಿ.ಜಿ, ಇಂಜಿನಿಯರ್ ಪ್ರೀಮಿಯರ್ ಲೀಗ್ನ ಜೊತೆ ಕಾರ್ಯದರ್ಶಿ ರಕ್ಷಿತ್ ಕೆ.ವಿ, ಸದಸ್ಯ ರಾಜಶೇಖರ್ ಉಪಸ್ಥಿತರಿದ್ದರು.