ಪುತ್ತೂರು: ಉಪ್ಪಿನಂಗಡಿ ಸಮೀಪದ ಕಾಂಚನ ಕುದುಮಾರು ಮನೆತನದ ಗಾನಕೇಸರಿ ಬಿರುದಾಂಕಿತ ವಿದ್ವಾನ್ ಕುದುಮಾರು ವೆಂಕಟರಾಮನ್ ಸ್ಮೃತಿ ಸಮಾರಂಭವು ಡಿ.15ರಂದು ಸಂಜೆ ಪುತ್ತೂರು ಅನುರಾಗ ವಠಾರದಲ್ಲಿ ನಡೆಯಲಿದೆ.
ಕರ್ನಾಟಕ ಸಂಘದ ಅಧ್ಯಕ್ಷ ನಿವೃತ್ತ ವಕೀಲ ಬಿ.ಪುರಂದರ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ನುಡಿನಮನ ಸಲ್ಲಿಸಲಿದ್ದಾರೆ. ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಚ್.ಮಾಧವ ಭಟ್ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಡ್ಯನಡ್ಕ ಗಾನ ಗಂಧರ್ವ ಸಂಗೀತ ಶಾಲೆಯ ಪಾರ್ವತಿ ಗಣೇಶ ಭಟ್ ಅವರು ತಿಳಿಸಿದ್ದಾರೆ.
ಆಂಜನೇಯ ಮಂತ್ರಾಲಯದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಗುರು:
ಗಾನ ಕೇಸರಿ ಕುದುಮಾರು ವೆಂಕಟ್ರಮಣನ್ ಖ್ಯಾತ ಸಂಗೀತ ವಿದ್ವಾನ್ .ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಗುರುಗಳಾಗಿ ಸೇವೆ ಸಲ್ಲಿಸಿದವರು. ವಿದುಷಿ ಸುಚಿತ್ರಹೊಳ್ಳ, ಪಾರ್ವತಿ ಪದ್ಯಾಣ ಮೊದಲಾದವರು ಅವರ ಶಿಷ್ಯರಾಗಿದ್ದರು. ಕೀರ್ತಿಶೇಷ ಚೆಂಬೈ ವೈದ್ಯನಾಥನ್ ರವರ ಶಿಷ್ಯಯೆಂಬ ಹೆಗ್ಗಳಿಕೆಗೆ ಪಾತ್ರರಾದವರು. ಬೆಂಗಳೂರು ಆತ್ಮಾಲಯ ಅಕಾಡೆಮಿ, ಬಾರ್ಯ ವಿಷ್ಣು ಮೂರ್ತಿ ನೂರಿತ್ತಾಯ ಪ್ರತಿಷ್ಠಾನ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳೊಂದಿಗೆ ತನ್ನ 75 ವರ್ಷದ ಸಂದರ್ಭದಲ್ಲಿ ಪುತ್ತೂರು ನಟರಾಜ ವೇದಿಕೆಯಲ್ಲಿ ಹಿಂದಿನ ಪೇಜಾವರ ಶ್ರೀ ಗಳವರ ಉಪಸ್ಥಿತಿಯಲ್ಲಿ ಸಾರ್ವಜನಿಕ ಸನ್ಮಾನ ಸ್ವೀಕರಿಸಿದರು.