ಪುತ್ತೂರು:ಚಿಕ್ಕಮುಡ್ನೂರು ಗ್ರಾಮದ ಊರಮಾಲು ಎಂಬಲ್ಲಿ ಜಮೀನಿಗೆ ಹಾಕಿದ್ದ ಬೇಲಿಯನ್ನು ಹಾನಿ ಮಾಡಿ ಜೀವ ಬೆದರಿಕೆಯೊಡ್ಡಿದ ಆರೋಪದ ದೂರಿಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಫುಲ್ಲ ವಿ.ಶೆಟ್ಟಿ ಎಂಬವರ ಸ್ವಾಧಿನವಿರುವ ಜಮೀನಿನ ಉಸ್ತುವಾರಿ ನೋಡುತ್ತಿರುವ ಪ್ರಭಾಕರ ಎಂಬವರು ದೂರುದಾರರು.‘ಡಿ.7ರಂದು ಆರೋಪಿಗಳಾದ ಅನಿತಾ ಭಂಡಾರಿ ಮತ್ತು ಪುಷ್ಪಾ ಹಾಗು ಇತರ 5 ಮಂದಿ ಹಾರೆ ಗುದ್ದಲಿ ಹಿಡಿದುಕೊಂಡು ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿ ಜಮೀನಿಗೆ ಹಾಕಿರುವ ಬೇಲಿಯನ್ನು ಹಾನಿ ಮಾಡಿದ್ದರು.ಈ ಕುರಿತು ವಿಚಾರಿಸಿದಾಗ ಆರೋಪಿಗಳು ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.ಪೊಲೀಸರು ಕಲಂ:189(2), 191(2), 191(3), 329(3), 324, 352, 351 ಜೊತೆಗೆ 190 BNS2023 ಯಂತೆ ಪ್ರಕರಣ ದಾಖಲಿಸಿದ್ದಾರೆ.