ಕಾಣಿಯೂರು: ಪುತ್ತೂರು ಕಡೆಗೆ ತೆರಳುತ್ತಿದ್ದ ರಿಟ್ಝ್ ಕಾರು ಹಾಗೂ ಅಂಕಜಾಲು ಕಡೆಗೆ ತೆರಳುತ್ತಿದ್ದ ಆಕ್ಟೀವಾ ಸ್ಕೂಟರ್ ಮಧ್ಯೆ ಬೆಳಂದೂರು ಗ್ರಾಮದ ಅಂಕಜಾಲಿನಲ್ಲಿ ಅಪಘಾತ ಸಂಭವಿಸಿದ ಘಟನೆ ಡಿ. 14ರಂದು ರಾತ್ರಿ ನಡೆದಿದೆ.
ಗಂಭೀರ ಗಾಯಗೊಂಡ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.