ಎಸಿಯವರ ಸೂಚನೆ: ವಿಶೇಷ ಚೇತನ ಯುವಕನ ಮನೆಗೆ ತೆರಳಿ ಆಧಾರ್ ನೋಂದಣಿ

0

ಕಡಬ: ವಿಶೇಷ ಚೇತನ ಯುವಕ ಮಹಮ್ಮದ್ ಆಸಿಫ್ ಅವರಿಗೆ ಆಧಾರ್‌ಕಾರ್ಡ್ ಮಾಡಿಕೊಡದೆ ನಿರ್ಲಕ್ಷ್ಯ ವಹಿಸಿರುವ ವಿಚಾರದಲ್ಲಿ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಲಾದ ಬೆನ್ನಲ್ಲೇ ಈ ವಿಚಾರದ ಕುರಿತು ಮಾಧ್ಯಮದವರು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಕೂಡಲೇ ಆಧಾರ್ ನೋಂದಣಿ ಮಾಡಿಸುವಂತೆ ಶುಕ್ರವಾರ ರಾತ್ರಿಯೇ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಅವರಿಗೆ ಎಸಿಯವರು ಮೌಖಿಕ ಸೂಚನೆ ನೀಡಿದ್ದರು. ಶನಿವಾರವೇ ಆಧಾರ್ ಕಾರ್ಡ್ ಪ್ರಕ್ರಿಯೆ ಮಾಡಿಸುವ ಬಗ್ಗೆ ಭರವಸೆ ನೀಡಿದ್ದರು.

ಈ ಬೆನ್ನಲ್ಲೇ ಕಡಬ ತಹಶೀಲ್ದಾರ್ ನೇತೃತ್ವದ ತಂಡ ಹಾಗೂ ಮಂಗಳೂರಿನಿಂದ ಆಗಮಿಸಿದ ಆಧಾರ್ ಸೇವಾ ಕೇಂದ್ರದವರು ವಿಕಲಚೇತನರ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಸುವ ಪ್ರಕ್ರಿಯೆಯನ್ನು ಮಾಡಿ ಮುಗಿಸಿದ್ದಾರೆ.

ಜನರ ಸೇವೆ ನಮ್ಮ ಕರ್ತವ್ಯ ಮಾಡಿದ್ದೇವೆ-ಜುಬಿನ್ ಮೊಹಪಾತ್ರ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸಿಯವರು ಅಂಗವಿಕಲ ಯುವಕನಿಗೆ ಆಧಾರ್ ಇಲ್ಲದಿರುವ ಬಗ್ಗೆ ಮೊನ್ನೆಯಷ್ಟೆ ತಿಳಿಯಿತು. ನಾನು ಕೂಡಲೇ ಆಧಾರ್ ಸೇವಾ ಕೇಂದ್ರದವರನ್ನು ಸಂಪರ್ಕಿಸಿ ಆಧಾರ್ ಮಾಡಿ ಕೊಡುವ ಬಗ್ಗೆ ಸೂಚನೆ ನೀಡಿದ್ದೇನೆ ಅದರಂತೆ ಶನಿವಾರವೇ ಕಡಬ ತಹಸೀಲ್ದಾರ್ ವಾಹನದಲ್ಲಿ ಯುವಕನ ಮನೆಗೆ ಹೋಗಿ ಆಧಾರ್ ನೋಂದಣಿ ಮಾಡಿದ್ದಾರೆ. ಕೆಲವೇ ದಿನದಲ್ಲಿ ಯುವಕನಿಗೆ ಆಧಾರ ಕಾರ್ಡ್ ಕೈಸೇರಲಿದೆ ಇದು ನಮ್ಮ ಕರ್ತವ್ಯ ಅಷ್ಟೆ ಅದನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.

ಎ.ಸಿ.ಯವರ ನಡೆಗೆ ಸಾರ್ವಜನಿಕರ ಶ್ಲಾಘನೆ

ಜಿಲ್ಲಾಧಿಕಾರಿಯವರ ಆದೇಶ ಇದ್ದರೂ ಆಧಾರ್ ಸೇವಾ ಕೇಂದ್ರದವರಾಗಲಿ, ಕಡಬ ತಾಲೂಕು ಆಡಳಿತ ಹಲವು ಸಮಯದಿಂದ ಯಾವುದೇ ಕ್ರಮ ಕೈಗೊಳ್ಳದೆ ಇದ್ದರೂ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರ ಗಮನಕ್ಕೆ ಬಂದ ಕೂಡಲೇ ವಿಕಲಾಂಗ ಯುವಕನಿಗೆ ಆಧಾರ್ ನೋಂದಣಿ ಆಗಿರುವುದರಿಂದ ಎ.ಸಿ.ಯವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here