ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಾರ್ಷಿಕೋತ್ಸವ

0

ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ ಬದುಕಬೇಕು-ಜುಬಿನ್ ಮೊಹಪಾತ್ರ
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ- ಹೇಮನಾಥ ಶೆಟ್ಟಿ

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ವತಿಯಿಂದ ನಡೆಸಲ್ಪಡುವ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಾರ್ಷಿಕೋತ್ಸವ ದ. 14 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.


ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಕಾರ್‍ಯಕ್ರಮ ಉದ್ಘಾಟಿಸಿ. ಸನ್ಮಾನವನ್ನು ಸ್ವೀಕರಿಸಿ, ಮಾತನಾಡಿ ದ.ಕ,ದಲ್ಲಿ ಸಾಂಸ್ಕೃತಿಕ ಸಂಪತ್ತು ಹೇರಳವಾಗಿದೆ, ಇಲ್ಲಿ ಆಧುನಿಕತೆ ಸೊಗಡಿನೊಂದಿಗೆ ಹಿಂದಿನ ಕಾಲದಿಂದ ನಡೆದು ಬಂದಿರುವ, ಯಕ್ಷಗಾನ, ಕಂಬಳವನ್ನು ಜನ ಬಹಳ ಪ್ರೀತಿಯಿಂದ ಸ್ವೀಕಾರ ಮಾಡುತ್ತಾರೆ. ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ ಬದುಕಬೇಕು, ಯಾವುದೇ ಒತ್ತಡವನ್ನು ನಾವು ತಲೆಗೆ ಹಾಕಿಕೊಳ್ಳಬಾರದು, ಖುಷಿಯಾಗಿ ಬದುಕಬೇಕು ಎಂದು ಹೇಳಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಾಧನೆಯ ಬಗ್ಗೆ ಹೆಮ್ಮೆಯಾಯಿತು. ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರ ನಾಯಕತ್ವದಲ್ಲಿ ಶಾಲೆಯು ಅತ್ಯುತ್ತಮವಾದ ಪ್ರಗತಿಯನ್ನು ಸಾಧಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ- ಹೇಮನಾಥ ಶೆಟ್ಟಿ:
ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿರವರು ಅಧ್ಯಕ್ಷತೆ ವಹಿಸಿ, ಮಾತನಾಡಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯು ವಿಜ್ಞಾನ ಕ್ಷೇತ್ರದಲ್ಲಿ ದಾಖಲೆಯನ್ನು ನಿರ್ಮಿಸಿದೆ. ನಮ್ಮ ಸಂಸ್ಥೆಯ 22 ವಿದ್ಯಾರ್ಥಿಗಳು ಅಂತರಾಪ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುವ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಒಳ್ಳೆಯ ಶಿಕ್ಷಣವನ್ನು ನುರಿತ ಶಿಕ್ಷಕರಿಂದ ನೀಡುವ ಮೂಲಕ ಸಂಸ್ಥೆಯು ಬಹುದೊಡ್ಡ ಸಾಧನೆಯನ್ನು ಮಾಡಿದೆ ಎಂದು ಹೇಳಿದ ಅವರು ನಮ್ಮ ಶಾಲೆಯಲ್ಲಿ ಹಾಸ್ಟೆಲ್ ಮತ್ತು ಬಸ್‌ನ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಇಲ್ಲ, ಆದರೂ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ, ಇಲ್ಲಿ ನೀಡುವ ಗುಣಮಟ್ಟದ ಶಿಕ್ಷಣವೇ ಇದಕ್ಕೆ ಕಾರಣವಾಗಿದೆ. ನಾವು ಯಾವುದೇ ವಿದ್ಯಾರ್ಥಿಯ ಅಂಕವನ್ನು ಪರಿಗಣಿಸದೇ 8 ನೇ ತರಗತಿಯಲ್ಲಿ ದಾಖಲಾತಿ ನೀಡಿ, ಆ ವಿದ್ಯಾರ್ಥಿಯನ್ನು ಕಲಿಕೆಯಲ್ಲಿ ಮುಂದೆ ಬರುವಂತೆ ಮಾಡುವ ಬಗ್ಗೆ ನಮ್ಮ ಸಂಸ್ಥೆಯು ಕಟಿಬದ್ದವಾಗಿದೆ. 100 ಶೆ ಫಲಿತಾಂಶವನ್ನು ದಾಖಲಿಸುವ ಮೂಲಕ, ಶಿಕ್ಷಣ ಕ್ಷೇತ್ರದಲ್ಲಿ ರಾಮಕೃಷ್ಣ ಪ್ರೌಢಶಾಲೆಯು ತೋರುತ್ತಿರುವ ಸಾಧನೆಯನ್ನು ಕಂಡು ಸಮಾಜವೇ ಸಂತೋಷ ಪಡುತ್ತಿದೆ ಎಂದರು.


ಸಾಧನೆಯನ್ನು ಮಾಡಿದೆ- ಕುಂಬ್ರ ದುರ್ಗಾಪ್ರಸಾದ್
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ ಇಲ್ಲಿನ ಶಿಕ್ಷಕರು ನೀಡುತ್ತಿರುವ ಶಿಕ್ಷಣದಿಂದ ವಿದ್ಯಾರ್ಥಿ ಸಮುದಾಯ ಬಹಳಷ್ಟು ಸಾಧನೆಯನ್ನು ಮಾಡಿದೆ, ಸಂಸ್ಥೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿಯವರು ಎಲ್ಲರನ್ನು ಒಂದಾಗಿ, ಒಟ್ಟಾಗಿ ಸೇರಿಸಿಕೊಂಡು, ಸಂಸ್ಥೆಯನ್ನು ಚೆನ್ನಾಗಿ ನಡೆಸಿಕೊಂಡಿ ಬರುತ್ತಿದ್ದಾರೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಚಿತ್ರ- ಜೀತ್ ಪುತ್ತೂರು

ಮನಸು ತುಂಬಿ ಬಂದಿದೆ- ಮಮತಾ
ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಬ್ಯಾಂಕ್ ಅಫ್ ಬರೋಡಾ ಪುತ್ತೂರು ಶಾಖೆಯ ಪ್ರಬಂಧಕರಾದ ಮಮತಾರವರು ಮಾತನಾಡಿ, ಈ ಶಾಲೆಯು ನೀಡಿದ ಗುಣಮಟ್ಟದ ಶಿಕ್ಷಣ ನನ್ನ ಬದುಕಿಗೆ ಸಹಕಾರಿಯಾಗಿದೆ ಎಂದು ಹೇಳಿ, ಶಾಲೆಯ ಪ್ರಗತಿಯನ್ನು ಕಂಡು ಮನಸು ತುಂಬಿ ಬಂದಿದೆ ಎಂದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ನಿರ್ದೇಶಕರಾದ ದಯಾನಂದ ರೈ ಮನವಳಿಕೆಗುತ್ತು, ಜೈರಾಜ್ ಭಂಡಾರಿ ಡಿಂಬ್ರಿ, ಜಯಪ್ರಕಾಶ್ ರೈ ನೂಜಿಬೈಲು, ವಾಣಿ ಶೆಟ್ಟಿ ನೆಲ್ಯಾಡಿ `ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ದಂಬೆಕ್ಕಾನ ಸದಾಶಿವ ರೈ, ಪುತ್ತೂರು ಮೂಕಾಂಬಿಕಾ ಗ್ಯಾಸ್ ಏಜೆನ್ಸೀಸ್ ಮಾಲಕ ಸಂಜೀವ ಆಳ್ವ, ತಾಲೂಕು ಬಂಟರ ಸಂಘದ ಪ್ರದಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಉಪಸ್ಥಿತರಿದ್ದರು.

ಪ್ರತಿಭಾವಂತ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.ತಾಲೂಕು ಯುವ ಬಂಟರ ಸಂಘದ ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು, ನಿವೃತ್ತ ವಿಜ್ಞಾನ ಶಿಕ್ಷಕಿ ವಸಂತಿ, ಯುವ ಬಂಟರ ಸಂಘದ ನಿಕಟಪೂರ್ವ ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸುದ್ದಿ ಬಿಡುಗಡೆ ವರದಿಗಾರ ಉಮಾಪ್ರಸಾದ್ ರೈ ನಡುಬೈಲು,
ಶಿಕ್ಷಕಿ ಗಾಯತ್ರಿ, ಚಿತ್ರಕಲಾ, ಸುಚಿತ್ರಾ ರೈ, ಹರ್ಷೀಣಿ, ತುಳಸಿ ಅತಿಥಿಗಳನ್ನು ಗೌರವಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ವರದಿ ವಾಚಿಸಿದರು. ಶಿಕ್ಷಕಿ ಗಾಯತ್ರಿ ಸ್ವಾಗತಿಸಿ, ಗೀತಾ ರೈ ಮತ್ತು ಸಂಧ್ಯಾ ಕಾರ್‍ಯಕ್ರಮ ನಿರೂಪಿಸಿದರು. ಸಭಾ ಕಾರ್‍ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಗೌರವವನ್ನು ತರಬೇಕು- ದಂಬೆಕ್ಕಾನ ಸದಾಶಿವ ರೈ
ಸಂಜೆ ಮಕ್ಕಳ ನೃತ್ಯೋತ್ಸವ ಕಾರ್‍ಯಕ್ರಮವನ್ನು `ಸಹಕಾರ ರತ್ನ’ ದಂಬೆಕ್ಕಾನ ಸದಾಶಿವ ರೈಯವರು ದೀಪಬೆಳಗಿಸಿ, ಉದ್ಘಾಟಿಸಿ. ಮಾತನಾಡಿ ನಮ್ಮ ಸಂಸ್ಕೃತಿ ಮತ್ತು ಶಿಕ್ಷಣ ಅತ್ಯಂತ ಶ್ರೇಷ್ಟವಾಗಿದ್ದು, ನಮ್ಮ ದೇಶದ ಭಾವಿ ಪ್ರಜೆಗಳಾದ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡುವ ಮೂಲಕ ಗೌರವವನ್ನು ತರಬೇಕು ಎಂದರು. ಸಂಸ್ಥೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಉತ್ತಮವಾದ ಸಾಧನೆಯನ್ನು ಶಾಲೆ ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ ಎಂದರು.


ಸಂಸ್ಥೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ತಾಲೂಕು ಪ್ರೌಢಶಾಲಾ ಮುಖ್ಯಸ್ಥರ ಸಂಘದ ಅಧ್ಯಕ್ಷ ವಸಂತ ಮೂಲ್ಯ, ಬಂಟರ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಹ ಸಂಚಾಲಕ ಸಾಜ ರಾಧಕೃಷ್ಣ ಆಳ್ವ, ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು, ಬಂಟರ ಸಂಘದ ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು, ಸುಪ್ರೀತ್ ಕಣ್ಣರಾಯ, ತಾಲೂಕು ಯುವ ಬಂಟರ ಸಂಘದ ಕೋಶಾಧಿಕಾರಿ ಶಿವಶ್ರೀರಂಜನ್ ರೈ ದೇರ್ಲ, ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here