





ಬಡಗನ್ನೂರು: ಪಡುಮಲೆ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ, ಬಡಗನ್ನೂರು ಗ್ರಾಮದ ಪಡುಮಲೆ ನಿವಾಸಿ ದೇವಿಪ್ರಸಾದ್ ಕೆ.ಸಿ.(57ವ.)ರವರು ಅನಾರೋಗ್ಯದಿಂದ ಡಿ.15ರಂದು ಸಂಜೆ ನಿಧನರಾಗಿದ್ದಾರೆ.


ದೇವಿಪ್ರಸಾದ್ ಅವರು ಕಳೆದ ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಅವರು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನಾಗಿದ್ದಾರೆ.





ದೇವಿಪ್ರಸಾದ್ ಕೆ.ಸಿ.ಅವರು ಕರ್ನೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದ್ದರು. ಬಳಿಕ ಕುಂಬ್ರ ಕ್ಲಸ್ಟರ್ ಸಿಆರ್‌ಪಿಯಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಮುಖ್ಯಶಿಕ್ಷಕರಾಗಿ ಭಡ್ತಿಗೊಂಡು ಪಡುಮಲೆ ಸರಕಾರಿ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಶಿಕ್ಷಕ ಕ್ಷೇತ್ರದಲ್ಲಿನ ಸೇವೆಗಾಗಿ ದೇವಿಪ್ರಸಾದ್ ಅವರಿಗೆ ದ.ಕ.ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು. ಅಲ್ಲದೇ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದರು.
ಮೃತರು ತಂದೆ ಕೆ.ಸಿ.ಪಾಟಾಳಿ ಪಡುಮಲೆ, ತಾಯಿ ಕುಮುದಾಕ್ಷಿ, ಪತ್ನಿ ಬುಶ್ರಾ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಶರ್ಮಿಳಾ, ಪುತ್ರ ಕೌಶಿಕ್ ಅವರನ್ನು ಅಗಲಿದ್ದಾರೆ.







