ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಬ್ರಹ್ಮಕಲಶೋತ್ಸವದ ಎರಡನೇ ದಿನವಾದ ಡಿ.19ರ ಮುಂಜಾನೆ ಉಷಃ ಪೂಜೆ, ಮಗಾಗಣಪತಿ ಹೋಮ, ಅಂಕುರಪೂಜೆ, ಚತುಃ ಶುದ್ದಿ , ಧಾರೆ, ಅವಗಾಹ ಪಂಚಕ ಬಿಂಬ ಶುದ್ದಿ ಖನನಾದಿ ಸ್ಥಳ ಸುದ್ದಿ ಸಹಿತ ಹಲವಾರು ವೈದಿಕ ವಿಧಿ ವಿಧಾನಗಳು ನಡೆಯಿತು.
ಮಧ್ಯಾಹ್ನ ಮಹಾ ಪೂಜೆ ಜರಗಿ ನೂರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಇದೇ ವೇಳೆ ದಿ| ನಡಸಾರು ಜಯರಾಮ ಭಟ್ ವೇದಿಕೆಯಲ್ಲಿ ವಿವಿಧ ಎಂಟು ಭಜನಾ ಮಂಡಳಿಗಳಿಂದ ದಿನವಿಡೀ ಭಜನಾ ಸೇವೆ ನಡೆಯಿತು. ಮಯೂರ ವೇದಿಕೆಯಲ್ಲಿ ಉಪ್ಪಿನಂಗಡಿ ಗಾನ ಭಾರತಿ ಸಂಗೀತ ಶಾಲೆ ವತಿಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಜರಗಿತು.
ಮನಸೂರೆಗೊಂಡ ದಾಸ ಸಾಹಿತ್ಯ
ಮಧ್ಯಾಹ್ನ ನಡೆದ ರಾಮಕೃಷ್ಣ ಕಾಟುಕುಕ್ಕೆ ಯವರಿಂದ ದಾಸ ಸಂಕೀರ್ತಣೆ ಭಕ್ತಾದಿಗಳ ಭಕ್ತಿ ರಸ ಧಾರೆಯಲ್ಲಿ ಮುಳುಗಿಸಿತು. ಸಂಕೀರ್ತನೆ ನಡೆಯುತ್ತಿದ್ದಂತೆಯೇ ಬಹಳಷ್ಟು ಭಕ್ತಾದಿಗಳು ಭಕ್ತಿ ಭಾವದಿಂದ ನರ್ತಿಸಿ ಸಂತಸಪಟ್ಟರು.