ಕಾಣಿಯೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪ ಇದರ ವಾರ್ಷಿಕೋತ್ಸವ ಚಿಣ್ಣರ ಕಲರವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ರವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹರೀಶ್ ಏಂತಡ್ಕ ಸದಸ್ಯರಾದ ನಿತ್ಯಾನಂದ ನಾಡ್ತಿಲಕೊಪ್ಪ ಗಣೇಶ ಪೂಜಾರಿ ಕೊಂಡಾಡಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಷಪ್ಪ ಪೂಜಾರಿ ಅರ್ಚಕರಾದ ರಾಘವೇಂದ್ರ ಭಟ್ ಶಾಲಾ ನಾಯಕ ರಕ್ಷಣ್ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಜಯಂತ್ ವೈ ಸ್ವಾಗತಿಸಿ ವಂದಿಸಿದರು.