ಪುತ್ತೂರು : ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಅಧೀನದಲ್ಲಿರುವ ಅನಿವಾಸಿ ಸಂಟ್ಯಾರಿಗರ ಸಂಘಟನೆಯಾದ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ಇದರ 10 ನೇ ವರ್ಷಾಚರಣೆಯ ಭಾಗವಾಗಿ ಸದಸ್ಯರ ಸ್ನೇಹಸಮ್ಮಿಲನ “ReConnect+” ದುಬೈನ ಮಲಿಕ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಿತು.
ಗಲ್ಫ್ ಫ್ರೆಂಡ್ಸ್ ಸಮಿತಿ ಕೋಶಾಧಿಕಾರಿ ಮಹಮ್ಮದ್ ಅಲಿ ಮರಿಕೆ ದುಆ ನೆರವೇರಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಗಲ್ಫ್ ಫ್ರೆಂಡ್ಸ್ ಉಪಾಧ್ಯಕ್ಷ ಬಶೀರ್ ಮರಿಕೆ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು.
ಸಂಟ್ಯಾರ್ ಜಮಾತ್ ನ ವಿದ್ಯಾರ್ಥಿಗಳ ಶೈಕ್ಷಣಿಕ ಸಬಲೀಕರಣ,ಸಮುದಾಯದ ಆರೋಗ್ಯ ,ವಿವಿಧ ಜಾಗೃತಿ ಕಾರ್ಯಕ್ರಮಗಳು,ಮದ್ರಸ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳು, ಸಮುದಾಯದ ಕೌಶಲ್ಯ ಅಭಿವೃದ್ದಿ, ಮಸೀದಿ ಮೂಲಸೌಕರ್ಯ ಮುಂತಾದ ವಿಷಯಗಳನ್ನು ಕೇಂದ್ರೀಕರಿಸಿ ದಶಮಾನೋತ್ಸವದ ಅಂಗವಾಗಿ ಮುಂದಿನ ಒಂದು ವರ್ಷಗಳಲ್ಲಿ 10 ಕಾರ್ಯಕ್ರಮಗಳು ನಡೆಸುವ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ ಕಾರ್ಯಕ್ರಮದಲ್ಲಿ ಘೋಷಿಸಿ ಪೋಸ್ಟರ್ ಬಿಡುಗಡೆ ಮಾಡಲಾಯಿತು. 10 ಕಾರ್ಯಕ್ರಮಗಳ ಸವಿಸ್ತಾರವಾದ ಮಾಹಿತಿಯನ್ನು ಸಮಿತಿ ಜೊತೆ ಕಾರ್ಯದರ್ಶಿಯಾದ ಅಝೀಝ್ ಕಲ್ಲರ್ಪೆ ವಿವರಿಸಿದರು.
ಸಮಿತಿಯ ನೂತನ ಇನ್ಸ್ಟಾಗ್ರಾಮ್ ಅಕೌಂಟ್ ನ್ನು ಕಾರ್ಯಕಾರಿ ಸಮಿತಿ ಸದಸ್ಯರಾದ ಮಹಮ್ಮದ್ ಕಲ್ಲರ್ಪೆ ಬಿಡುಗಡೆಗೊಳಿಸಿದರು. ಗಲ್ಫ್ ಫ್ರೆಂಡ್ಸ್ ಸದಸ್ಯರಿಗೆ ಇದೇ ಸಂದರ್ಭದಲ್ಲಿ ಸಮಿತಿಯ ಐಡಿ ಕಾರ್ಡ್ ಗಳನ್ನು ಸಮಿತಿ ಸದಸ್ಯರುಗಳಾದ ಅಶ್ರಫ್ ಅಲೈನ್ ಕಲ್ಲರ್ಪೆ ಹಾಗೂ ಇಸ್ಮಾಯಿಲ್ ನೀರ್ಕಜೆ ವಿತರಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಆಶಿಕ್ ಕಲ್ಲರ್ಪೆ ಸಮಾರೋಪ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಶರೀಫ್ ಮರಿಕೆ ಶಾರ್ಜಾ, ಇರ್ಶಾದ್ ಕಲ್ಲರ್ಪೆ, ರಾಝಿಕ್ ಬಳಕ್ಕ, ನಾಸಿರ್ ನೀರ್ಕಜೆ, ಉಮ್ಮರ್ ಫಾರೂಕ್ ನೀರ್ಕಜೆ, ಮುಸ್ತಫಾ ಮರಿಕೆ, ನೌಶಾದ್ ಕಲ್ಲರ್ಪೆ, ರಿಯಾಝ್ ಕಲ್ಲರ್ಪೆ, ಸಫ್ವಾನ್ ಕಲ್ಲರ್ಪೆ ಉಪಸ್ಥಿತರಿದ್ದರು.