ಪುತ್ತೂರು: ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಡೆದ ಅತೀ ಕಿರಿಯ ಚೆಸ್ ಮಾಂತ್ರಿಕ ಡಿ.ಗುಕೇಶ್‌ರವರು ಜ.8ರಂದು ಖಾಸಗಿ ಕಾರ‍್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಯುವ ಉದ್ಯಮಿ ಹರ್ಷ ಕುಮಾರ್ ರೈ ಮಾಡಾವುರವರು ಭೇಟಿಯಾಗಿ ಪುತ್ತೂರಿನ ಜನತೆಯ ಪರವಾಗಿ ಅಭಿನಂದಿಸಿದರು.
ಪತ್ತೂರು ಶ್ರೀಮಹಾಲಿಂಗೇಶ್ವರ ದೇವರ ಬೆಳ್ಳಿಯ ಮೂರ್ತಿಯ ಫೋಟೋ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಕರ್ನಾಟಕ ಚೆಸ್ ಅಸೋಸಿಯೇಶನ್ ಉಪಾಧ್ಯಕ್ಷೆ ಪುತ್ತೂರು ಮೂಲದ ಸೌಮ್ಯ ಉಪಸ್ಥಿತರಿದ್ದರು.