ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿಯಲ್ಲಿ ಪೋಷಕರಿಗಾಗಿ ಶಿಕ್ಷಣ ಶಿಕ್ಷಕ ಪೋಷಕ ಎಂಬ ವಿನೂತನ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ, 33 ವರ್ಷಗಳ ಸೇವಾ ಅನುಭವದ ಬಿವಿ ಸೂರ್ಯನಾರಾಯಣ ಮಾತನಾಡುತ್ತಾ ಮಕ್ಕಳನ್ನು ಓದಿನಲ್ಲಿ ಮಾತ್ರ ತೊಡಗಿಸಿಕೊಳ್ಳದೆ ಇನ್ನಿತರ ಪಠ್ಯೇತರ, ಮನರಂಜನ, ಗೃಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರಲ್ಲಿ ಮನವಿ ಮಾಡಿದರು. ಮಕ್ಕಳನ್ನು ತಂದೆ ತಾಯಿ ಮೊದಲು ತಿದ್ದಬೇಕು ಬಾಲ್ಯ ಸಂಸ್ಕಾರವೇ ಮಕ್ಕಳನ್ನು ಸಮಾಜ ಗುರುತಿಸುವಂತೆ ಮಾಡುತ್ತದೆ. ಮಕ್ಕಳನ್ನು ಒತ್ತಡಕ್ಕೆ ಒಳಪಡಿಸದೆ ಅವರನ್ನು ಸ್ವತಂತ್ರವಾಗಿ ಬೆಳೆಯಲು ಬಿಡುವುದು ಉತ್ತಮ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ರಾಜೇಶ್ ನೆಲ್ಲಿತ್ತಡ್ಕ ಸ್ವಾಗತಿಸಿದರು. ಸಹ ಶಿಕ್ಷಕಿ ಸಂಧ್ಯಾ ವಂದಿಸಿದರು. ಸಹ ಶಿಕ್ಷಕರಾದ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 300ಕ್ಕಿಂತ ಹೆಚ್ಚು ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.