ಪುತ್ತೂರು: ಸರ್ವೆ ಎಸ್ಜಿಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಗುರು ಶ್ರೀನಿವಾಸ್ ಎಚ್.ಬಿ ಮತ್ತು ಜಯಶ್ರೀ ಶ್ರೀನಿವಾಸ್ ಅವರ ಆತಿಥ್ಯದಲ್ಲಿ, ಕಲ್ಲಮ ಶ್ರೀ ಗುರು ರಾಘವೇಂದ್ರ ಮಠ, ಶ್ರೀ ರಕ್ಷಾ ಕಲಾ ಕೇಂದ್ರ ಬೊಳ್ವಾರು, ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ, ಶ್ರೀನಿವಾಸ್ ಎಚ್.ಬಿ ಶಿಷ್ಯ ವೃಂದ ಹಾಗೂ ಅಭಿಮಾನಿ ಬಳಗದ ಸಹಭಾಗಿತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿಯವರಿಗೆ ಅಭಿನಂದನಾ ಕಾರ್ಯಕ್ರಮ ಜ.19ರಂದು ಪೂರ್ವಾಹ್ನ ಬೊಳ್ವಾರು ಶ್ರೀ ರಕ್ಷಾ ಕಲಾ ಕೇಂದ್ರದಲ್ಲಿ ನಡೆಯಲಿದೆ.
ಕಿಶೋರ್ ಕುಮಾರ್ ಬೊಟ್ಯಾಡಿಯವರು ಶ್ರೀನಿವಾಸ್ ಎಚ್.ಬಿ ಮತ್ತು ಜಯಶ್ರೀ ಶ್ರೀನಿವಾಸ್ ಅವರ ಶಿಷ್ಯನಾಗಿದ್ದು, ಗುರುಗಳಿಂದ ಶಿಷ್ಯ ಅಭಿನಂದನೆ ಸ್ವೀಕರಿಸಿದ್ದಾರೆ. ಅನೇಕ ಗಣ್ಯರು ಭಾಗವಹಿಸಲಿದ್ದಾರೆ.