- ಪುತ್ತೂರು ನಗರಸಭೆ ಸಭಾಭವನದಲ್ಲಿ ಬೆಳಿಗ್ಗೆ ೧೧ಕ್ಕೆ ನಗರಸಭೆ ಆಯವ್ಯಯ ತಯಾರಿಕೆ ಪೂರ್ವಭಾವಿ ಸಭೆ
- ನಿಡಳ್ಳಿ ಗ್ರಾ.ಪಂ ಕಚೇರಿಯ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
- ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಿಂದ ಬ್ಯಾಂಕ್ ರಸ್ತೆಯಾಗಿ ಗಾಂಧಿ ಪಾರ್ಕ್, ಶ್ರೀವಿದ್ಯಾ ಪೆಟ್ರೋಲ್ ಪಂಪ್ ಮೂಲಕ ವೇದಶಂಕರ ನಗರಕ್ಕೆ ಮೆರವಣಿಗೆ,
- ಉಪ್ಪಿನಂಗಡಿ ವದಶಂಕರನಗರ ಶ್ರೀರಾಮ ಶಾಲೆಯಲ್ಲಿ ಅಪರಾಹ್ನ ೨ಕ್ಕೆ ಭಗವಾನ್ ಶ್ರೀರಾಮ ಆಂಜನೇಯ ಪ್ರತಿಮೆಯ ಪುರಪ್ರವೇಶ
- ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಸಂಜೆ ೬ರಿಂದ ಜೆಸೀಐ ನೆಲ್ಯಾಡಿ ೨೦೨೫ನೇ ಸಾಲಿನ ಘಟಕಾಡಳಿತ ಮಂಡಳಿ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮತ್ತು ತಂಡದ ೪೨ನೇ ವರ್ಷದ ಪದಸ್ವೀಕಾರ ಸಮಾರಂಭ
- ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ಉಗ್ರಾಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ರಾತ್ರಿ ೭ಕ್ಕೆ ದೇವತಾ ಪ್ರಾರ್ಥನೆ, ಧ್ವಜಾರೋಹಣ, ೭.೩೦ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಶ್ರೀ ಭೂತ ಬಲಿ
- ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಬೆಳಿಗ್ಗೆ ೯.೩೦ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ೧೨ಕ್ಕೆ ಕಲಶಾಭಿಷೇಕ, ಮಹಾಪೂಜೆ, ಸಂಜೆ ೫.೩೦ರಿಂದ ಭರತನಾಟ್ಯ, ೬.೩೦ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆಪೂಜೆ, ನೃತ್ಯ ಬಲಿ
- ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ, ಸಂಜೆ ೬ರಿಂದ ಸುಗಮ ಸಂಗೀತ, ರಾತ್ರಿ ೮ರಿಂದ ಭರತನಾಟ್ಯ
- ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬೆಳಿಗ್ಗೆ ೮ಕ್ಕೆ ತಂತ್ರಗಳ ಆಗಮನ, ದೇವತಾ ಪ್ರಾರ್ಥನೆ, ಸಾನಿಧ್ಯ ಕಲಶಾಭಿಷೇಕ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ರಾತ್ರಿ ೭.೩೦ಕ್ಕೆ ರಂಗಪೂಜೆ, ಉಳ್ಳಾಕುಲು, ರಕ್ತೇಶ್ವರಿ ದೈವಗಳ ಭಂಡಾರ ಹೊರಡುವುದು, ೮.೩೦ಕ್ಕೆ ಶ್ರೀ ತಂತ್ರ ಬಲಿ, ನೃತ್ಯ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ೧೧.೩೦ರಿಂದ ಶ್ರೀ ಉಳ್ಳಾಕುಲು, ರಕ್ತೇಶ್ವರಿ, ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ಗುಳಿಗ ದೈವಗಳ ನೇಮೋತ್ಸವ
- ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ೧೮ನೇ ವರ್ಷದ ನಗರ ಭಜನೆ ಪ್ರಯುಕ್ತ ಪದವುಕೋಡಿ, ಚೀಮುಳ್ಳು, ನೀರೊಲ್ಬೆ, ಬಳಪ್ಪು, ಕುಕ್ಕುಂತೋಟದಲ್ಲಿ ಬೈಲುವಾರು ಭಜನೆ
- ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಸಂಜೆ ೬.೩೦ರಿಂದ ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿಪೂಜೆ
- ಈಶ್ವರಮಂಗಲ ಯಾಸೀನ್ ಮುತ್ತು ತಂಙಳ್ ನಗರದಲ್ಲಿ ಈಶ್ವರಮಂಗಲ ಮಖಾಂ ಉರೂಸ್ ಸಮಾರೋಪ
- ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ (ಉಳ್ಳಾಕುಲು), ವ್ಯಾಘ್ರ ಚಾಮುಂಡಿ (ರಾಜನ್ ದೈವ) ದೈವಸ್ಥಾನದಲ್ಲಿ ಬೆಳಿಗ್ಗೆ ೧೧ರಿಂದ ಕಿನ್ನಿಮಾಣಿ ದೈವದ ನೇಮ, ಅನ್ನಸಂತರ್ಪಣೆ, ರಾತ್ರಿ ೮ರಿಂದ ಪಾಲಕ್ಕಿ ಉತ್ಸವ, ಬೀರ ತಂಬಿಲ
- ಬೆಟ್ಟಂಪಾಡಿ ರೆಂಜ ಫಾರೂಖ್ ಜುಮಾ ಮಸೀದಿ ವಠಾರದಲ್ಲಿ ೨೬ನೇ ಸ್ವಲಾತ್ ವಾರ್ಷಿಕದ ಪ್ರಯುಕ್ತ ರಾತ್ರಿ ೭.೩೦ಕ್ಕೆ ಧಾರ್ಮಿಕ ಉಪನ್ಯಾಸ, ತಾಜುಲ್ ಉಲಮಾ ಅನುಸ್ಮರಣೆ
ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಕುರೆಮಜಲುರವರ ಉತ್ತರಕ್ರಿಯೆ