ಬಡಗನ್ನೂರು:ಶ್ರೀ ಪುಮಾಣಿ ಕಿನ್ನಿಮಾಣಿ (ಉಳ್ಳಾಕಲು) ಹಾಗೂ ರಾಜನ್ ದೈವಗಳ ದೈವಸ್ಥಾನ ಪಡುಮಲೆ ಇದರ ವಾರ್ಷಿಕ ನೇಮೋತ್ಸವ ಅಂಗವಾಗಿ ಜ.16 ರಂದು ಕಿನ್ನಿಮಾಣಿ ದೈವದ ನೇಮ, ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರವಿರಾಜ್ ಶೆಟ್ಟಿ ಅಣಿಲೆ, ಸದಸ್ಯರಾದ ದಯಾ ವಿ ರೈ ಬೆಳ್ಳಿಪಾಡಿ,ರವಿರಾಜ ರೈ ಸಜಂಕಾಡಿ, ಶಶಿಧರ ರೈ ಕುತ್ಯಾಳ, ಶ್ರೀಧರ ನಾಯ್ಕ ನೇರ್ಲಪಾಡಿ, ವಿಶ್ವನಾಥ ಪೂಜಾರಿ ಪೂಜಾರಿಮೂಲೆ, ಜಾತ್ರೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ, ಜತೆ ಕಾರ್ಯದರ್ಶಿ ಸುರೇಶ್ ರೈ ಪಲ್ಲತ್ತಾರು, ಕೋಶಾಧಿಕಾರಿ ರಾಜೇಶ್ ರೈ ಮೇಗಿನಮನೆ, ಪ್ರಮುಖರಾದ ಜಯಂತ ರೈ ಕುದ್ಕಾಡಿ, ಗಣೇಶ್ ರೈಮುಳಿಪಡ್ಪು, ಕೃಷ್ಣ ರೈ ಕುದ್ಕಾಡಿ, ಅರ್ಚಕ ಮಹಾಲಿಂಗ ಸೇನವರಾದ ಉದಯ ಕುಮಾರ್ ಪಡುಮಲೆ ಮತ್ತು ಊರಪರವೂರ ಭಕ್ತಾದಿಗಳು ಭಾಗವಹಿಸಿದರು.
ಜ.17:ಜ.17 ರಂದು ಬೆಳಗ್ಗೆ ಗಂ 11 ರಿಂದ ಪೂಮಾಣಿ ದೈವದ ನೇಮ , ರಾತ್ರಿ ಪಲ್ಲಕ್ಕಿ ಉತ್ಸವ ಬೀರತಂಬಿಲ ನಡೆಯಲಿದೆ.