ಪುತ್ತೂರು: 2023-24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಶಾಸ್ತ್ರೀಯ ನೃತ್ಯದ ವಿದ್ವತ್ ಪರೀಕ್ಷೆಯಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ ನಾಲ್ವರು ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಶ್ರೀದೇವಿ ಕೋಟೆ ಇವರು ಶೇ.82 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಪರ್ಲಡ್ಕ ನಿವಾಸಿ ಸತ್ಯನಾರಾಯಣ ಕೋಟೆ ಮತ್ತು ಶಾಂತಾ ಕೋಟೆ
ದಂಪತಿ ಪುತ್ರಿಯಾದ ಈಕೆ ಬಿಎಸ್ಸಿ ಪದವೀಧರೆ. ಸ್ವಾತಿ ಸಿ ಇವರು ಶೇ.72.2 ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, ಈಕೆ ಮುರಳೀಧರ ವೆಂಕಟೇಶ ಅವರ ಪತ್ನಿ. ಇವರು ಕೇರಳದ ಪಾಲಕ್ಕಾಡ್ನಲ್ಲಿ ನೃತ್ಯೋಹಂ ಸ್ಕೂಲ್ ಆಫ್ ಡ್ಯಾನ್ಸ್ ಹೆಸರಿನಲ್ಲಿ ಭರತನಾಟ್ಯ ನೃತ್ಯ ತರಗತಿ ನಡೆಸುತ್ತಿದ್ದಾರೆ. ಶ್ರದ್ಧಾ ಎ. ಇವರು ಶೇ.68.4 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, ಉಪ್ಪಿನಂಗಡಿಯ ಸುಬ್ರಾಯ ಮತ್ತು ಶಾಂತಾ ದಂಪತಿ ಪುತ್ರಿ. ಈಕೆ ಶಿಶಿಲದಲ್ಲಿ ನೃತ್ಯಭೂಷಿಣಿ ಕಲಾ ಶಾಲೆಯನ್ನು ನಡೆಸುತ್ತಿದ್ದಾರೆ.
ಮಧುರಾ ಕೆ. ಇವರು ಶೇ. 68 ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿ. ಪತಿ ಪ್ರಶಾಂತ್ ವೈದ್ಯ. ಈಕೆ ಬೆಂಗಳೂರಿನಲ್ಲಿ ನೃತ್ಯಾರ್ಣವ ಕಲಾ ಶಾಲೆ ಹೆಸರಿನಲ್ಲಿ ಭರತನಾಟ್ಯ ತರಗತಿ ನಡೆಸುತ್ತಿದ್ದಾರೆ. ಇವರು ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಇವರ ಶಿಷ್ಯೆಯರು.