ಪುತ್ತೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಮೊಟ್ಟೆತ್ತಡ್ಕದ ನೃತ್ಯಗುರು ವಿದುಷಿ ಪ್ರಮೀಳಾ ಉದಯ್ ನಡೆಸಿಕೊಡುವ ನಾಟ್ಯರಂಜಿನಿ ಕಾಲಾಲಯ ಸಂಸ್ಥೆಗೆ ಶೇ.100 ಫಲಿತಾಂಶ ಲಭಿಸಿದ್ದು, ನಾಲ್ವರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ.
ಮುಕ್ರಂಪಾಡಿ ನಿವಾಸಿ ಚಿದಾನಂದ ರೈ ಹಾಗೂ ನಮಿತಾ ರೈ ದಂಪತಿ ಪುತ್ರಿ, ಸುದಾನ ವಸತಿಯುತ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಸಾನ್ವಿ ರೈ ಎನ್.ರವರು 87.25 ಅಂಕ, ಕೂರ್ನಡ್ಕ ನಿವಾಸಿ ಎಚ್. ರಾಮದಾಸ್ ನಾಯಕ್ ಹಾಗೂ ಎಚ್. ವಂದನಾ ನಾಯಕ್ ದಂಪತಿ ಪುತ್ರಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಎಚ್.ತನ್ವಿ ನಾಯಕ್ ರವರು ಶೇ.85 ಅಂಕ, ಮೊಟ್ಟೆತ್ತಡ್ಕ ದಿ.ಕೇಶವ ಸಪಲ್ಯ ಹಾಗೂ ಸೌಮ್ಯ ದಂಪತಿ ಪುತ್ರಿ, ಫಿಲೋಮಿನಾ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಪ್ರತೀಕ್ಷಾ ಕೆ.ರವರು ಶೇ.84.75 ಅಂಕ, ನೈತ್ತಾಡಿ ನಿವಾಸಿ ಪ್ರಕಾಶ್ ರೈ ಹಾಗೂ ಪ್ರಮೀಳಾ ಪ್ರಕಾಶ್ ರೈ ದಂಪತಿ ಪುತ್ರ, ವಿವೇಕಾನಂದ ಶಾಲೆಯಲ್ಲಿ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಪ್ರಿಯಲ್ ರೈರವರು ಶೇ.75 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ ಎಂದು ಮೊಟ್ಟೆತ್ತಡ್ಕ ನಾಟ್ಯರಂಜಿನಿ ಕಾಲಾಲಯ ಸಂಸ್ಥೆಯ ನೃತ್ಯಗುರು ವಿದುಷಿ ಪ್ರಮೀಳಾ ಉದಯ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.