ಮತದಾರರ ಪಟ್ಟಿಯನ್ನು ಬ್ಯಾಂಕ್‌ನಿಂದ ಹ್ಯಾಕ್ ಮಾಡಿಲ್ಲ – ಸುದರ್ಶನ್ ಮುರ ಸ್ಪಷ್ಟನೆ

0

ಪುತ್ತೂರು: ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಮತದಾರರ ಪಟ್ಟಿಯನ್ನು ಬ್ಯಾಂಕ್‌ನಿಂದ ಹ್ಯಾಕ್ ಮಾಡಿದಲ್ಲ ಈಗಿನ ನಿಕಟಪೂರ್ವ ನಿರ್ದೇಶಕರ ಕೈಯಿಂದ ಹ್ಯಾಕ್ ಮಾಡಿ ತೆಗೆದುಕೊಂಡಿರುವುದಾಗಿ ಸಹಕಾರ ಸಾಮ್ರಾಟ್ ಹೋರಾಟ ಸಮಿತಿ ಸಂಚಾಲಕ, ಅಭ್ಯರ್ಥಿ ಸುದರ್ಶನ್ ಮುರ ಸ್ಪಷ್ಟನೆ ನೀಡಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ನಾನು ಮತದಾರರ ಪಟ್ಟಿಯನ್ನು ಬ್ಯಾಂಕ್‌ನಿಂದ ಹ್ಯಾಕ್ ಮಾಡಿದ್ದು ಎಂದು ಹೇಳಿಲ್ಲ. ನಿಕಟಪೂರ್ವ ನಿರ್ದೇಶಕರ ಕೈಯಿಂದ ಹ್ಯಾಕ್ ಮಾಡಿದ್ದು ಎಂದು ಹೇಳಿದ್ದೆ. ಬ್ಯಾಂಕ್‌ನವರು ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಕೊಡಲಿಲ್ಲ. ಆಗ ಏನಾದರೂ ಮಾಡಿ ಪಡೆಯುತ್ತೇನೆ ಎಂದು ಪಡೆದುಕೊಂಡಿದ್ದೇನೆ. ಬ್ಯಾಂಕ್‌ನಲ್ಲಿ ಸಿಇಒ ಅವರ ನಿಯಂತ್ರಣ ಸರಿಯಿಲ್ಲ. ಇಬ್ಬರು ನಿಕಟಪೂರ್ವ ನಿರ್ದೇಶಕರಿಂದ ಬ್ಯಾಂಕ್‌ನಿಂದ ಹ್ಯಾಕ್ ಮಾಡಿರಬಹುದಾದ ಸಾಧ್ಯತೆ ಇದೆ. ನನಗೆ ಅವರ ವಿರೋಧಿ ಬಿಜೆಪಿಯವರೇ ಉಚಿತವಾಗಿ ಕೊಟ್ಟಿದ್ದಾರೆ. ಕಲರ್ ಪೊಟೋ ಐಡಿಯೂ ಉಚಿತವಾಗಿ ಸಿಕ್ಕಿದೆ. ಪತ್ರಿಕೋಷ್ಟಿಯಲ್ಲಿ ಕೊನೆಗೆ ಹ್ಯಾಕ್ ಮಾಡಿರುವುದಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here