ಇಂದಿನ ಕಾರ್ಯಕ್ರಮ(24/01/2025)

0

ಪುತ್ತೂರು ನಗರ ಸಭೆ, ತಾಲೂಕು ಪಂಚಾಯತ್‌ನ ಸಹಯೋಗದೊಂದಿಗೆ ನಗರ ಸಭೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ’ ಧ್ಯೇಯವಾಕ್ಯದೊಂದಿಗೆ ಸ್ವಚ್ಛತಾ ಶ್ರಮದಾನ ಅಭಿಯಾನ
ಪಡ್ನೂರು ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦ಕ್ಕೆ ಪಡ್ನೂರು ವಾರ್ಡ್, ಬನ್ನೂರು ಕಜೆ ಅಂಗನವಾಡಿ ಕೇಂದ್ರದಲ್ಲಿ ೧೧ಕ್ಕೆ ಬನ್ನೂರು ವಾರ್ಡ್, ಚಿಕ್ಕಮುಡ್ನೂರು ಬೀರಿಗ ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ ೩.೩೦ಕ್ಕೆ ಚಿಕ್ಕಮುಡ್ನೂರು ವಾರ್ಡ್‌ನ ವಾರ್ಡುಸಭೆ
ಬಿಳಿನೆಲೆ ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಸವಣೂರು ಮೊಗರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕೋತ್ಸವ, ಸಪ್ತತಿ ಸಂಭ್ರಮ, ಶಂಕುಸ್ಥಾಪನೆ, ದತ್ತಿನಿಧಿ ವಿತರಣೆ, ಸನ್ಮಾನ ಕಾರ್ಯಕ್ರಮ
ಬೊಳುವಾರು ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಬೆಳಿಗ್ಗೆ ೮ರಿಂದ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ,
ಚಂಡಿಕಾ ಯಾಗ, ಕಲಶಪೂಜೆ, ಕಲಶಾಭಿಷೇಕ, ನಾಗದೇವರಿಗೆ ಪಂಚಾಮೃತಾಭಿಷೇಕ, ತಂಬಿಲ ಸೇವೆ, ಮಲರಾಯ, ಪರಿವಾರ ದೈವಗಳಿಗೆ ತಂಬಿಲ ಸೇವೆ, ೯ಕ್ಕೆ ಭಗವದ್ಗೀತೆ ಪಾರಾಯಣ, ೧೦ಕ್ಕೆ ಶ್ರೀ ಲಲಿತ ಸಹಸ್ರ ನಾಮ ಪಠಣ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸಂಜೆ ೩ರಿಂದ ಭಕ್ತಿ-ಭಾವ-ಗಾನ ಸಂಭ್ರಮ, ೫ರಿಂದ ನೃತ್ಯಾರ್ಪಣಂ, ೬.೩೦ರಿಂದ ಭಜನೆ, ರಾತ್ರಿ ೭ರಿಂದ ದುರ್ಗಾಪೂಜೆ, ರಂಗಪೂಜೆ, ೮ರಿಂದ ದಕ್ಷಯಜ್ಞ-ವೀರವರ್ಮ ಕಾಳಗ-ಯಕ್ಷಗಾನ ಬಯಲಾಟ
ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವದ ಕಾಲಾವಧಿ ತಂಬಿಲ, ಅನ್ನಸಂತರ್ಪಣೆ
ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನದಲ್ಲಿ ಬೆಳಿಗ್ಗೆ ೪ಕ್ಕೆ ಧ್ವಜಾವರೋಹಣ, ೮ಕ್ಕೆ ಕಾನ ತರವಾಡು ಮನೆಯಿಂದ ಇಷ್ಟದೇವತೆಯ ಭಂಡಾರ, ಪಳಂಬೆ ಮನೆಯಿಂದ ರುದ್ರಾಂಡಿ ದೈವದ ಭಂಡಾರ ಬರುವುದು, ೧೦ರಿಂದ ಇಷ್ಟದೇವತೆಯ ನೇಮೋತ್ಸವ
ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ೧೮ನೇ ವರ್ಷದ ನಗರ ಭಜನೆ ಪ್ರಯುಕ್ತ ಬೋಳಾಜೆ, ಮೊಗಪ್ಪು, ಪರನೀರು, ಕೊತ್ತಳಿಂಗೆ, ಪೋಳ್ಯ, ಡೆಕ್ಕಾಜೆಯಲ್ಲಿ ಬೈಲುವಾರು ಭಜನೆ
ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ, ಇರ್ವೆರ್ ಉಳ್ಳಾಕುಲ ದೈವಗಳ ಕ್ಷೇತ್ರ ಅಮರ ಕಾಸ್ಪಾಡಿಯಲ್ಲಿ ದೈವಗಳ ಬಂಡಿ ಉತ್ಸವ, ಕಿನ್ನಿಮಾಣಿ ದೈವದ ನೇಮೋತ್ಸವ ಚಂದುನಾಯರ್, ಮಧ್ಯಾಹ್ನ ೧ಕ್ಕೆ ಮರ್ಲ್ ಮಾಣಿ ಕಳಂಗಾಜೆ ಮಾಡದಲ್ಲಿ ನೇಮೋತ್ಸವ
ಉಪ್ಪಿನಂಗಡಿ ಕೂಟೇಲು ದಡ್ಡುವಿನ ನೇತ್ರಾವತಿ ನದಿ ಕಿನಾರೆಯ ಬದಿಯಲ್ಲಿರುವ ಕಂಬಳ ಕರೆಯಲ್ಲಿ ಬೆಳಿಗ್ಗೆ ಉಬಾರ್ ಕಂಬಳೋತ್ಸವದ ಕರೆ ಮುಹೂರ್ತ
ಮುಕ್ವೆ ರಹ್ಮಾನಿಯಾ ಜುಮಾ ಮಸೀದಿ ವಲಿಯುಲ್ಲಾಹಿ ದರ್ಗಾ ಶರೀಫ್ ಮರ್‌ಹೂಂ ಸಯ್ಯಿದ್ ಪಾಣಕ್ಕಾಡ್ ಪಿ.ಎಂ.ಎಸ್.ಎ ಪೂಕೋಯ ತಂಙಳ್ ನಗರದಲ್ಲಿ ಮುಕ್ವೆ ಮಖಾಂ ಉರೂಸ್, ಮುಖ್ಯ ಪ್ರಭಾಷಣ, ಇಷ್ಕ್ ಮಜ್ಲಿಸ್
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರು ಮಧ್ಯಾಹ್ನ ೨ರಿಂದ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ, ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ
ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ಶ್ರೀ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಶ್ರೀ ದೈವಗಳ ಕೀರ್ವಾಳು ಭಂಡಾರ ಆರ್ಲಪದವು ದೈವಸ್ಥಾನಕ್ಕೆ ಕೊಂಡು ಹೋಗಿ ಧ್ವಜಾರೋಹಣ, ತಂಬಿಲಗಳು
ಕಡಬ ಶ್ರೀ ಶ್ರೀಕಂಠಸ್ವಾಮಿ, ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ ೭ರಿಂದ ಮಹಾಗಣಪತಿ ಹೋಮ, ಸಂಸ್ಕಾರ ಮಂಗಲ ಹೋಮ, ಕಲಶ ಪೂಜೆ, ಆಶ್ಲೇಷಾ ಬಲಿ, ೧೦.೧೩ರಿಂದ ನಾಗಶಿಲಾ ಪ್ರತಿಷ್ಠೆ, ರಕ್ತೇಶ್ವರಿ, ವ್ಯಾಘ್ರ ಚಾಮುಂಡಿ, ಇತರ ದೈವಗಳ ಪ್ರತಿಷ್ಠೆ, ಸಾನಿಧ್ಯಕಲಶಾಭಿಷೇಕ, ಅಷ್ಠವಟು ಆರಾಧನೆ, ತಂಬಿಲ ಸೇವೆ
ಸಾಲ್ಮರ ಕೆರೆಮೂಲೆ ಧೂಮಾವತಿ, ಪರಿವಾರ ದೈವಗಳ ತರವಾಡು ಮನೆಯಲ್ಲಿ ಬೆಳಿಗ್ಗೆ ೮.೧೫ರಿಂದ ತರವಾಡು ಮನೆಯ ಗೃಹಪ್ರವೇಶ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸಂಜೆ ೬ಕ್ಕೆ ದೈವಗಳ ಭಂಡಾರ ತೆಗೆಯುವುದು, ದೈವಗಳ ನೇಮೋತ್ಸವ, ಅನ್ನಸಂತರ್ಪಣೆ
ಹಿರೇಬಂಡಾಡಿ ಸರೋಳಿ ನಾಗದೇವರು, ನಾಗಕನ್ನಿಕೆ, ರಕ್ತೇಶ್ವರಿ, ಗುಳಿಗ, ಬೈರವ ಸಾನಿಧ್ಯದಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಕಲಶಾದಿ ಪೂಜೆಗಳು, ೮.೧೫ಕ್ಕೆ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ಸಂಜೆ ೬ರಿಂದ ಪರಿವಾರ ದೈವಗಳ ನೇಮೋತ್ಸವ
ತುರ್ಕಳಿಕೆ ಹಯಾತುಲ್ ಔಲಿಯಾ ದರ್ಗಾ ಶರೀಫ್ ವಠಾರದಲ್ಲಿ ರಾತ್ರಿ ಉರೂಸ್ ಮುಬಾರಕ್, ಧಾರ್ಮಿಕ ಉಪನ್ಯಾಸ


ಶುಭಾರಂಭ
ನೆಹರುನಗರ, ಕಲ್ಲೇಗ ದೈವಸ್ಥಾನದ ಮುಂಭಾಗ ಪಟ್ಲ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೮.೧೫ಕ್ಕೆ ಹೋಟೆಲ್ ‘ಶ್ರೀಕೃಷ್ಣ ಭವನ’ ಸ್ಥಳಾಂತರಗೊಂಡು ಶುಭಾರಂಭ


ಗೃಹಪ್ರವೇಶ
ಕೋಡಿಂಬಾಡಿಯಲ್ಲಿ ನಿರಂಜನ ರೈ ಮಠಂತಬೆಟ್ಟುರವರ ನೂತನ ಮನೆ ‘ಅನಂತಾಮೃತ’ದ ಗೃಹಪ್ರವೇಶ
ಮಾಡನ್ನೂರು ಗ್ರಾಮದ ಬಜಕುಡೇಲುನಲ್ಲಿ ನೂತನ ಮನೆ ದೇವವರ ನಿಲಯದ ಗೃಹಪ್ರವೇಶ


ಉತ್ತರಕ್ರಿಯೆ
ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಬಲ್ನಾಡು ಕುದುರೆಮಜಲು ಜಾರಪ್ಪ ಕುಲಾಲ್‌ರವರ ಉತ್ತರಕ್ರಿಯೆ

LEAVE A REPLY

Please enter your comment!
Please enter your name here