ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ “ಕೌರವೇಂದ್ರನ ಕೊಂದೆ ನೀನು” – ಗಮಕ ಪ್ರಸ್ತುತಿ

0

ಪುತ್ತೂರು: ಗಮಕ ಕಲಾ ಪ್ರಸ್ತುತಿ ಕಲಿಕೆಯನ್ನು ಆಸಕ್ತಿದಾಯಕ ಮತ್ತು ಆಲೋಚನಾ ಸೂಕ್ಷ್ಮತೆಯನ್ನು ಬೆಳೆಸಲು ಸಹಕಾರಿಯಾಗಿದೆ. ಹಾಗಾಗಿ ಎಳವೆಯಿಂದಲೇ ರಾಮಾಯಣ-ಮಹಾಭಾರತ ಕಥಾ ಭಾಗಗಳನ್ನು ಗಮಕ ಕಲಾ ಪ್ರಸ್ತುತಿಯೊಂದಿಗೆ ಅಭ್ಯಾಸ ಮಾಡುವುದರಿಂದ ಪುರಾಣ ಪಾತ್ರಗಳ ಪರಿಚಯ, ಹಾಡುವ ಅಭ್ಯಾಸ, ಮಾತುಗಳ ಚಾಕಚಕ್ಯತೆ ಬೆಳೆಯುತ್ತದೆ ಎಂದು ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯ ಮಾತನಾಡಿದರು.

ವಿವೇಕಾನಂದ ಕನ್ನಡ ಶಾಲೆಯ ಪ್ರೌಢ ವಿಭಾಗದ ಮಕ್ಕಳಿಗೆ ಹತ್ತನೇ ತರಗತಿಯ ಪಾಠ ಕೃಷ್ಣ – ಕರ್ಣ ಸಂಧಾನ ಭಾಗವನ್ನು ಪ್ರೇಮಾ ನೂರಿತ್ತಾಯ ವಾಚಿಸಿ, ’ಧೀ ಶಕ್ತಿ’ ಯಕ್ಷ ಬಳಗದ ನಿರ್ದೇಶಕರಾದ ಪದ್ಮಾ ಆಚಾರ್ ಅವರು ವ್ಯಾಖ್ಯಾನ ಮಾಡಿದರು.

ಶಾಲಾ ಸಹಶಿಕ್ಷಕಿ ವೀಣಾಸರಸ್ವತಿ ಕಾರ್ಯಕ್ರಮ ಸಂಯೋಜಿಸಿದರು. ಪುತ್ತೂರು ಗಮಕ ಕಲಾ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ವೇದವ್ಯಾಸ, ಕಾರ್ಯದರ್ಶಿ ಶಂಕರಿ ಶರ್ಮ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಪ್ರೌಢವಿಭಾಗದ ಮುಖ್ಯಗುರು ಆಶಾ ಬೆಳ್ಳಾರೆ ವಂದಿಸಿ, ಪ್ರಾಥಮಿಕ ವಿಭಾಗದ ಮುಖ್ಯಗುರು ನಳಿನಿ ವಾಗ್ಲೆ ಇವರು ಸ್ಮರಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here